Asianet Suvarna News Asianet Suvarna News

MS ಧೋನಿ ಹೊಸ ಹೇರ್‌ಸ್ಟೈಲ್, ಬಂದೇ ಬಿಡ್ತು ಬಿಗ್‌ಬಾಸ್ ಫೈನಲ್; ಜು.30ರ ಟಾಪ್ 10 ಸುದ್ದಿ!

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿ ಸೇರಿ ಹಿರಿಯ ನಾಯಕರನ್ನು ಭೇಟಿಯಾಗಿದ್ದಾರೆ. IPLಗೂ ಮುನ್ನ ಧೋನಿ ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಬಿಗ್‌ಬಾಸ್ ಸೀಸನ್ 8ರ ಫೈನಲ್ ಇದೇ ಅಗಸ್ಟ್ 7 ಮತ್ತು 8ರಂದು ನಡೆಯಲಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ. ರಿಯಲ್ ಹೀರೋ ಸೋನು ಸೂದ್‌ಗೆ ಹುಟ್ಟು ಹಬ್ಬ ಸಂಭ್ರಮ, ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗುಬಾಣ ಸೇರಿದಂತೆ ಜುಲೈ 30ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

MS Dhoni New hairstyle to Big boss kannada finale top 10 News of July 30 ckm
Author
Bengaluru, First Published Jul 30, 2021, 7:15 PM IST
  • Facebook
  • Twitter
  • Whatsapp

PM ಮೋದಿ ಭೇಟಿಯಾದ CM ಬೊಮ್ಮಾಯಿಗೆ ಸಿಕ್ತು ಕರ್ನಾಟಕದ ಅಭಿವೃದ್ಧಿ ಭರವಸೆ!

MS Dhoni New hairstyle to Big boss kannada finale top 10 News of July 30 ckm

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡನೇ ದಿನ ಬಸವರಾಜ್ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ನೂತನ ಸಿಎಂಗೆ ಪ್ರಧಾನಿ ಮೋದಿ ಶುಭಕೋರಿದ್ದಾರೆ. ಇಷ್ಟೇ ಅಲ್ಲ ಕರ್ನಾಟಕದ ಅಭಿವೃದ್ಧಿಗೆ ಕೇಂದ್ರದಿಂದ ಎಲ್ಲಾ ಸಹಕಾರ ನೀಡುವುದಾಗಿ ಮೋದಿ ಭರವಸೆ ನೀಡಿದ್ದಾರೆ.

ಪ್ರಧಾನಿ ಮೋದಿ ಭೇಟಿಯಾಗಲು ನಿರ್ಧರಿಸಿದ ಎಚ್‌ಡಿ ಕುಮಾರಸ್ವಾಮಿ: ಕಾರಣ..?

MS Dhoni New hairstyle to Big boss kannada finale top 10 News of July 30 ckm

ಮೇಕೆದಾಟು ಯೋಜನೆ ಪರವಾಗಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಧ್ವನಿ ಎತ್ತಿದ್ದಾರೆ. ಕೇಂದ್ರದ ಬಳಿಗೆ ಹೋಗಿ ಅನುಮತಿ ಪಡೆಯಲು ಪ್ರಯತ್ನಿಸಬೇಕು ಎಂದು ಕುಮಾರಸ್ವಾಮಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದಾರೆ.

ಸ್ವಾತಂತ್ರ್ಯೋತ್ಸವದ ಮೋದಿ ಭಾಷಣಕ್ಕೆ ನಿಮ್ಮ ಯೋಚನೆ, ಸಲಹೆಗಳಿಗೆ ಅವಕಾಶ!

MS Dhoni New hairstyle to Big boss kannada finale top 10 News of July 30 ckm

ಭಾರತ ಈ ಬಾರಿ ತನ್ನ 75 ನೇ ಸ್ವಾತಂತ್ರ್ಯೋವವನ್ನು ಆಚರಿಸುತ್ತಿದೆ. ಈ ಬಾರಿ ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ದೇಶವನ್ನುದ್ದೆಶಿಸಿ ಮಾಡಲಿರುವ ಭಾಷಣ ಹೊಸದೊಂದು ವಿಚಾರಕ್ಕೆ ಸಾಕ್ಷಿಯಾಗಲಿದೆ. 

ಎಬೋಲಾ, SARS,ಚಿಕನ್‌ಪಾಕ್ಸ್‌ಗಿಂತ ಅಪಾಯಕಾರಿ ಡೆಲ್ಟಾ : 3ನೇ ಅಲೆ ಮುನ್ಸೂಚನೆ!

MS Dhoni New hairstyle to Big boss kannada finale top 10 News of July 30 ckm

ದೇಶದಲ್ಲಿ ಅದರಲ್ಲೂ ಪ್ರಮುಖವಾಗಿ ಕೇರಳದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಇದರಿಂದ ಕರ್ನಾಟಕದಲ್ಲೂ ಆತಂಕ ಹೆಚ್ಚಾಗಿದೆ. ಇದು 3ನೇ ಅಲೆ ಮುನ್ಸೂಚನೆ ಅನ್ನೋ ಮಾತುಗಳು ಬಲವಾಗುತ್ತಿದೆ. ಇದರ ಬೆನ್ನಲ್ಲೇ ಅಮೆರಿಕ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಹಾಗೂ ಪ್ರಿವೆನ್ಶನ್ ಡೆಲ್ಟಾ ವೈರಸ್ ಹಾಗೂ 3ನೇ ಅಲೆ ಕುರಿತು ಮಹತ್ವದ ಎಚ್ಚರಿಕೆ ನೀಡಿದೆ.

ಟೋಕಿಯೋ ಒಲಿಂಪಿಕ್ಸ್‌ 2020 - ಪದಕ ಗೆಲವ ಹಾದಿಯಲ್ಲಿ ಪಿ.ವಿ. ಸಿಂಧು !

MS Dhoni New hairstyle to Big boss kannada finale top 10 News of July 30 ckm

ಭಾರತೀಯ ಶಟ್ಲರ್ ಪಿ.ವಿ ಸಿಂಧು ರಿಯೊ ಒಲಿಂಪಿಕ್ಸ್ 2016ರಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ರಸ್ತುತ ಟೋಕಿಯೊದಲ್ಲಿ ನೆಡೆಯುತ್ತಿರುವ  ಒಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಪದಕ ಗೆಲ್ಲುವ ಭರವಸೆಯ ಆಟಗಾರ್ತಿ ಸಿಂಧು ಕ್ವಾಟರ್‌ಫೈನಲ್‌ಗೆ ತಲುಪಿದ್ದಾರೆ.   ಸಿಂಧು ಅವರು ಈ ಸಾಧನೆಗಳನ್ನು ಮಾಡಲು ನೆಡೆದು ಬಂದಿರುವ ಹಾದಿ ಸುಲಭವಾಗಿಲ್ಲ. ಕಠಿಣ ಪರಿಶ್ರಮ, ಪ್ರೀತಿಪಾತ್ರರಿಂದ ದೂರವಿರುವುದು ಮತ್ತು ಒಲಿಂಪಿಕ್ ಹಂತವನ್ನು ತಲುಪಲು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. 

IPLಗೂ ಮುನ್ನ ಡ್ಯಾಶಿಂಗ್ ಲುಕ್‌ನಲ್ಲಿ ಕಂಗೊಳಿಸಿದ ಎಂಎಸ್‌ ಧೋನಿ

MS Dhoni New hairstyle to Big boss kannada finale top 10 News of July 30 ckm

ಭಾರತ ಕಂಡ ದಿಗ್ಗಜ ಕ್ರಿಕೆಟ್ ನಾಯಕ, ಎರಡು ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಅಭಿಮಾನಿಗಳ ಮುಂದೆ ವಿಶಿಷ್ಟ ಅವತಾರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ವಿಶಿಷ್ಟ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

Happy Birthday: ರಿಯಲ್ ಹೀರೋ ಸೋನು ಸೂದ್ ಹೇಗಿದ್ರು ನೋಡಿ..!

MS Dhoni New hairstyle to Big boss kannada finale top 10 News of July 30 ckm

ನಟ ಸೋನು ಸೂದ್ ಇಂದು ಬಾಲಿವುಡ್‌ನ ಅತ್ಯಂತ ಚಾರ್ಮಿಂಗ್ ಮತ್ತು ಫಿಟ್ ನಟರಲ್ಲಿ ಒಬ್ಬರು. ಹಿಂದಿ, ತೆಲುಗು, ತಮಿಳು ಸೇರಿ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ ಸೋನು ಸೆಲ್ಫ್ ಮೇಡ್ ಮ್ಯಾನ್.

ಆ.7 ಮತ್ತು 8ರಂದು ಬಿಗ್‌ಬಾಸ್‌ ಸೀಸನ್‌ 8 ಫಿನಾಲೆ!

MS Dhoni New hairstyle to Big boss kannada finale top 10 News of July 30 ckm

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 8ರ ಗ್ರ್ಯಾಂಡ್‌ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. 

ಎಥೆನಾಲ್, ಎಲೆಕ್ಟ್ರಿಕ್ ವಾಹನ ಆಯ್ತು, ಈಗ ಗ್ರೀನ್ ಹೈಡ್ರೋಜನ್ ಇಂಧನ

MS Dhoni New hairstyle to Big boss kannada finale top 10 News of July 30 ckm

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಗ್ರೀನ್ ಹೈಡ್ರೋಜನ್ ಇಂಧನ ಬಳಕೆಯ  ಸಾಧ್ಯತೆಗಳ ಬಗ್ಗೆ ಪರಿಶೀಲಿಸುತ್ತಿದೆ. ಈ ಬಗ್ಗೆ ಸಚಿವ ನಿತಿನ್ ಗಡ್ಕರಿ ಅವರು ಸುಳಿವು ಬಿಟ್ಟುಕೊಟ್ಟಿದ್ದಾರೆ. ಗ್ರೀನ್ ಹೈಡ್ರೋಜನ್ ಬಳಕೆಯಿಂದ ಸಾಂಪ್ರದಾಯಿಕ ಇಂಧನ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜೊತೆಗೆ ಪರಿಸರ ಸಂರಕ್ಷಣೆಯೂ ಆಗಲಿದೆ.

ಬಿಜೆಪಿಗೆ ಕೋಲು ಕೊಟ್ಟು ಹೊಡೆಸ್ಕೊಂಡ್ರಾ ಮಾಜಿ ಸಿಎಂ ಸಿದ್ದರಾಮಯ್ಯ?

MS Dhoni New hairstyle to Big boss kannada finale top 10 News of July 30 ckm

ರಾಜ್ಯ ರಾಜಕೀಯದಲ್ಲಿ ಮಹಾತ್ಮ ಗಾಂಧಿಯ ಕುಡುಕ ಮಗನೂ ಬಂದ. ಗಾಂಧಿ ಮಗ ಕುಡುಕ ಆಗಿರ್ಲಿಲ್ವಾ ಅಂದ್ರು ಮಾಜಿ ಸಿಎಂ ಸಿದ್ದರಾಮಯ್ಯ. ಹಳಿ ತಪ್ಪಿದ ಸಿದ್ದು ಮಾತಿಗೆ ಬಿಜೆಪಿ ಗುದ್ದು. ಸಿಎಂ ಬೊಮ್ಮಾಯಿ, ಅಪ್ಪ- ಮಗ, ವಂಶ ರಹಸ್ಯ. ಸಿದ್ದು ವಿವಾದದಲ್ಲಿ ಎದ್ದು ಬಂದಿದ್ದೇಕೆ ಪುತ್ರ ರಾಕೇಶ್ ವಿಷಯ?

Follow Us:
Download App:
  • android
  • ios