Asianet Suvarna News Asianet Suvarna News

ಮುಪ್ಪಿನಲ್ಲಿ ಅಪ್ಪನಾಗುವ ಸಂತಸದಲ್ಲಿದ್ದಾರೆ ಮಿ.ಬೀನ್

ಮಿಸ್ಟರ್‌ ಬೀನ್‌' ಪಾತ್ರದ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ 62ರ ನಟ ರೋವನ್‌ ಅಟ್ಕಿನ್‌ಸನ್‌ ಇದೀಗ ಮೂರನೇ ಸಲ ತಂದೆಯಾಗುವ ಸಂತಸದಲ್ಲಿದ್ದಾರೆ.

Mr Bean Become Dad at his old age

ನವದೆಹಲಿ (ನ.16): ಮಿಸ್ಟರ್‌ ಬೀನ್‌' ಪಾತ್ರದ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ 62ರ ನಟ ರೋವನ್‌ ಅಟ್ಕಿನ್‌ಸನ್‌ ಇದೀಗ ಮೂರನೇ ಸಲ ತಂದೆಯಾಗುವ ಸಂತಸದಲ್ಲಿದ್ದಾರೆ.

ಮೊದಲ ಪತ್ನಿಯಿಂದ ಇಬ್ಬರು ಮಕ್ಕಳಿರುವ ರೋವನ್‌, ಸದ್ಯ 33 ವರ್ಷದ ಲೂಯಿಸ್‌ ಫೋರ್ಡ್‌ ಜತೆ ಸಹಜೀವನ ನಡೆಸುತ್ತಿದ್ದಾರೆ. ಕಳೆದ ಭಾನುವಾರ ಉತ್ತರ ಲಂಡನ್‌ನ ಶಾಪಿಂಗ್‌ ಮಾಲ್‌ನಲ್ಲಿ ಲೂಯಿಸ್‌ ಕಾಣಿಸಿಕೊಂಡಿದ್ದು ಆಕೆ ಗರ್ಭಿಣಿ ಎಂಬುದು ಜಾಹೀರಾಗಿದೆ. ರೋವನ್‌ಗೆ ಈಗಾಗಲೆ 25 ವರ್ಷದ ಮಗ, 21 ವರ್ಷದ ಮಗಳು ಇದ್ದಾರೆ. ರೋವನ್‌ ಮೊದಲ ಪತ್ನಿ ಸುನೇತ್ರಾ ಶಾಸ್ತ್ರಿ ಆಂಗ್ಲೋ ಇಂಡಿಯನ್‌ ಎಂಬುದು ವಿಶೇಷ. ಇಂಗ್ಲೆಂಡಿನ ಆಕ್ಸ್‌ಫರ್ಡ್‌ ಶೈರ್‌ನಲ್ಲಿ 18.94 ದಶಲಕ್ಷ ಡಾಲರ್‌ ವೆಚ್ಚದಲ್ಲಿ ತನ್ನ ಮೊದಲ ಪತ್ನಿ ಸುನೇತ್ರಾ ಜತೆ ಜಂಟಿಯಾಗಿ ನಿರ್ಮಿಸುತ್ತಿದ್ದ ಐಶಾರಾಮಿ ಮನೆಯ ವಿಚಾರದಲ್ಲಿ ಜಗಳ ಅಡಿಕೊಂಡ ಕಾರಣ ಸುನೇತ್ರಾ-ರೋವನ್‌ ಬೇರ್ಪಟ್ಟಿದ್ದರು. 2014ರಲ್ಲಿ ಸುನೇತ್ರಾದಿಂದ ವಿಚ್ಛೇದಿತನಾದ ಬಳಿಕ ಲೂಯೀಸ್‌ರನ್ನು ಮದುವೆಯಾಗಿದ್ದರು.

Follow Us:
Download App:
  • android
  • ios