Asianet Suvarna News Asianet Suvarna News

ರಸ್ತೆಗೆ ಹುತಾತ್ಮ ಮೇಜರ್ ಹೆಸರಿಡಲು ನಿರ್ಲಕ್ಷ್ಯ: RC ಆಕ್ರೋಶ

ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಹೆಸರನ್ನು ಯಲಹಂಕ ಕ್ಷೇತ್ರದ ರಸ್ತೆಯೊಂದಕ್ಕೆ ನಾಮಕರಣ ಮಾಡಲು ನಿರ್ಣಯ ಕೈಗೊಂಡು ಹತ್ತು ತಿಂಗಳಾದರೂ ನಾಮಕರಣಕ್ಕೆ ಕ್ರಮ ಕೈಗೊಳ್ಳದ ಬಿಬಿಎಂಪಿ ಕ್ರಮಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

MP Rajeev Chandrashekar urges BBMP to name martyr Akshay Girish name to a road of Yelahanka
Author
Bengaluru, First Published Nov 27, 2018, 3:10 PM IST

ಬೆಂಗಳೂರು : ರಾಜಧಾನಿ ಬೆಂಗಳೂರಿನವರೇ ಆದ ಹುತಾತ್ಮ ಮೇಜರ್ ‘ಅಕ್ಷಯ್ ಗಿರೀಶ್ ಕುಮಾರ್’ ಅವರ ಹೆಸರನ್ನು ಯಲಹಂಕ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆಯೊಂದಕ್ಕೆ ನಾಮಕರಣ ಮಾಡಲು ನಿರ್ಣಯ ಕೈಗೊಂಡು ವರ್ಷ ಕಳೆಯುತ್ತಿದ್ದರೂ ರಸ್ತೆಗೆ ನಾಮಕರಣ ಮಾಡದೆ ಬಿಬಿಎಂಪಿ ನಿರ್ಲಕ್ಷ್ಯ ವಹಿಸುತ್ತಿದೆ.

ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 13 ನೇ ಮುಖ್ಯರಸ್ತೆಯಿಂದ ಮೇಜರ್ ಉನ್ನಿಕೃಷ್ಣನ್ ರಸ್ತೆವರೆಗಿನ ‘16 ನೇ ಅಡ್ಡರಸ್ತೆಗೆ’ ಹುತಾತ್ಮ ಮೇಜರ್ ‘ಅಕ್ಷಯ್ ಗಿರೀಶ್ ಕುಮಾರ್’ ಅವರ ಹೆಸರು ನಾಮಕರಣ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೇ ಫೆ. 19 ರಂದು ನಡೆಸಲಾದ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ಆದರೆ, ನಿರ್ಣಯ ಕೈಗೊಂಡು ಹತ್ತು ತಿಂಗಳೇ ಕಳೆದರೂ ಆ ರಸ್ತೆಗೆ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಹೆಸರು ನಾಮಕರಣ ಮಾಡದೆ ಪಾಲಿಕೆ ಅಧಿಕಾರಿಗಳು ಬೇಜವಾಬ್ದಾರಿ ತನ ಪ್ರದರ್ಶಿಸಿದ್ದಾರೆ.

ಅಕ್ಷಯ್ ಗಿರೀಶ್ ಅವರು 2016 ರ ನವೆಂಬರ್ 29 ರಂದು ಹುತಾತ್ಮರಾಗಿದ್ದರು. ಈ ನವೆಂಬರ್ 29ಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿದೆ. ಈ ವೇಳೆಗಾ ದರೂ ಗಿರೀಶ್ ಕುಮಾರ್ ಹೆಸರನ್ನು ರಸ್ತೆ ನಾಮಕರಣ ಮಾಡಬೇಕು ಎಂದು ಸಾರ್ವಜನಿಕರ ಆಗ್ರಹ. ಆದರೆ, ಈ ಬಗ್ಗೆ ಬಿಬಿಎಂಪಿ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ಬಿಬಿಎಂಪಿಯ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ನಗರದ ರಸ್ತೆಗಳಿಗೆ ಇತ್ತೀಚಿನ ದಿನಗಳಲ್ಲಿ ಕೆಲ ಕಾರ್ಪೊರೇಟರ್‌ಗಳು ತಮ್ಮ ತಂದೆ, ತಾಯಿ, ಕುಟುಂಬದವರ ಹೆಸರು ಶಿಫಾರಸು ಮಾಡುತ್ತಿದ್ದಾರೆ. 

ಅದನ್ನೆಲ್ಲಾ ಕೌನ್ಸಿಲ್ ಸಭೆಗೆಯ ಗಮನಕ್ಕೆ ತಾರದೆ ಅನುಮೋದನೆ ನೀಡುವ ಕೆಲಸಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ, ದೇಶದಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಹೆಸರನ್ನು ಇಡಲು ಬಿಬಿಎಂಪಿ ನಿರ್ಲಕ್ಷ್ಯ ತೋರುತ್ತಿರುವುದೇಕೆ. ನಿರ್ಣಯ ಕೈಗೊಂಡರೂ ರಸ್ತೆಗೆ ಹೆಸರು ನಾಮಕರಣ ಮಾಡದೆ ಅಧಿಕಾರಿಗಳು ಬೇಜವಾಬ್ದಾರಿ ತನ ಪ್ರದರ್ಶಿಸುತ್ತಿರುದು ಸರಿಯಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.

ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಮೂಲತಃ ಬೆಂಗಳೂರಿನ ಯಲಹಂಕ ಮೂಲದವರು. 2016 ರ ನವೆಂಬರ್‌ನಲ್ಲಿ ಕಾಶ್ಮೀರದಲ್ಲಿಉಗ್ರ ರೊಂದಿಗೆ ನಡೆದ ಕಾದಾಟದಲ್ಲಿ ಏಳು ಜನ ಯೋಧರು ವೀರ ಮರಣವನ್ನಪ್ಪಿದ್ದರು. ಇವರಲ್ಲಿ ಅಕ್ಷಯ್ ಗಿರೀಶ್ ಕುಮಾರ್ ಕೂಡ ಒಬ್ಬರು. ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು 2003 ರಲ್ಲೇ ದೇಶದ ಕಾವಲಿಗಾಗಿ ತೆರಳಿದ್ದ ಅವರು, ಹೆತ್ತವರು, ಹೆಂಡತಿ, ಮಗಳನ್ನೂ ಬಿಟ್ಟು ಕಾಶ್ಮೀರದಲ್ಲಿ ದೇಶದ ಕಾವಲಿಗೆ ನಿಯೋಜಿತರಾಗಿದ್ದರು. 

2016 ರ ನವೆಂಬರ್‌ನಲ್ಲಿ ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಹೋರಾಟದಲ್ಲಿ ಅವರು ಹುತಾತ್ಮರಾದರು. ಇಂತಹಾ ಮಹಾನ್ ಯೋಧನ ಕಳೆದುಕೊಂಡು ಇಡೀ ನಾಡೇ ಕಣ್ಣೀರಿಟ್ಟಿತ್ತು. ಅವರ ಹೆಸರನ್ನು ನಗರದ ಪ್ರಮುಖ ರಸ್ತೆಯೊಂದಕ್ಕೆ ನಾಮಕರಣ ಮಾಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. 

ಅದರಂತೆ ಬಿಬಿಎಂಪಿ 2018 ರ ಫೆಬ್ರವರಿ 19 ರ ಕೌನ್ಸಿಲ್ ಸಭೆಯಲ್ಲೇ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 13ನೇ ಮುಖ್ಯರಸ್ತೆಯಿಂದ ಮೇಜರ್ ಉನ್ನಿಕೃಷ್ಣನ್ ರಸ್ತೆವರೆಗಿನ ‘ 16ನೇ ಅಡ್ಡರಸ್ತೆಗೆ’ ಹುತಾತ್ಮ ಮೇಜರ್ ‘ಅಕ್ಷಯ್ ಗಿರೀಶ್ ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ನಿರ್ಣಯ ಕೈಗೊಂಡಿತ್ತು. ಆದರೆ, ಈ ವರೆಗೂ ರಸ್ತೆಗೆ ನಾಮಕರಣ ಮಾಡಿಲ್ಲ. 

ಮೇಯರ್‌ಗೆ ರಾಜೀವ್ ಚಂದ್ರಶೇಖರ್ ಪತ್ರ

ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಹೆಸರನ್ನು ಯಲಹಂಕ ಕ್ಷೇತ್ರದ ರಸ್ತೆಯೊಂದಕ್ಕೆ ನಾಮಕರಣ ಮಾಡಲು ನಿರ್ಣಯ ಕೈಗೊಂಡು ಹತ್ತು ತಿಂಗಳಾದರೂ ನಾಮಕರಣಕ್ಕೆ ಕ್ರಮ ಕೈಗೊಳ್ಳದ ಬಿಬಿಎಂಪಿ ಕ್ರಮಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಇತ್ತೀಚೆಗೆ ಮೇಯರ್ ಗಂಗಾಂಬಿಕೆ ಅವರಿಗೆ ಪತ್ರ ಬರೆದಿರುವ ಅವರು, ಯಲಹಂಕ ಕ್ಷೇತ್ರದ 13 ನೇ ಮುಖ್ಯರಸ್ತೆಯ ಮೇಜರ್ ಉನ್ನಿಕೃಷ್ಣನ್ ರಸ್ತೆವರೆಗಿನ 16 ನೇ ಅಡ್ಡರಸ್ತೆಗೆ ಹುತಾತ್ಮ ಮೇಜರ್ ಗಿರೀಶ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಕಳೆದ ಫೆಬ್ರವರಿಯಲ್ಲಿ ನಿರ್ಣಯ ಕೈಗೊಳ್ಳ ಲಾಗಿತ್ತು. ಆದರೆ, ಈ ವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾಧಕರ. ಅತಿ ಶೀಘ್ರವಾಗಿ ರಸ್ತೆಯ ನಾಮಕರಣಕ್ಕೆ ಕ್ರಮ ಕೈಗೊಳ್ಳಬೇಕು. 

ಈ ಹಿಂದಿನ ನಿರ್ಣಯದಲ್ಲಿ ‘ಅಕ್ಷಯ್ ಗಿರೀಶ್ ಕುಮಾ ರ್ ರಸ್ತೆ’ ಎಂದು ಕೈಗೊಂಡಿರುವ ನಿರ್ಣಯದ ಬದಲು, ‘ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ರಸ್ತೆ’ ಎಂದು ನಾಮಕರ ಮಾಡಬೇಕೆಂದು ಸಂಸದ ರಾಜೀವ್ ಚಂದ್ರಶೇಖರ್ ಮನವಿ ಮಾಡಿದ್ದಾರೆ. 

Follow Us:
Download App:
  • android
  • ios