ನವದೆಹಲಿ[ಅ.19]: ಹವಮಾನ ವೈಪರಿತ್ಯದಿಂದ ಹೆಲಿಕ್ಯಾಪ್ಟನ್ ಟೇಕ್ ಆಫ್’ಗೆ ಅಡಚಣೆಯಾದ್ದರಿಂದ ಸಂಸದ ರಾಹುಲ್ ಗಾಂಧಿ ಕೆಲಕಾಲ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಕಾಲ ಕಳೆದರು.

ಕಾಂಗ್ರೆಸ್ ಪ್ರಣಾಳಿಕೆ ಕದ್ದೊಯ್ಯಿರಿ: ಪ್ರಧಾನಿ ಮೋದಿಗೆ ರಾಹುಲ್ ಆಮಂತ್ರಣ!

ಹರ್ಯಾಣದ ಮಹೇಂದ್ರಘಢದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ರೆವಾರಿ ಎಂಬಲಿಂದ ತೆರಳಬೇಕಿತ್ತು. ಹವಾಮಾನ ಕೈಕೊಟ್ಟಿದ್ದರಿಂದ ರಾಹುಲ್ ಗಾಂಧಿ ಅಲ್ಲೇ ಕೆಲಕಾಲ ಉಳಿಯಬೇಕಾಯಿತು. ಈ ವೇಳೆ ಮಕ್ಕಳ ಜತೆ ಕ್ರಿಕೆಟ್ ಆಡಿ ಸಂಭ್ರಮಿಸಿದರು. 

ಚಾಮುಂಡೇಶ್ವರಿ ಸೋಲು: ‌ಚುನಾವಣೆಯಲ್ಲಿ ನಾಯಕರ ಸುಳ್ಳು ಮಾಹಿತಿ ಬಿಚ್ಚಿಟ್ಟ ಸಿದ್ದು

ಈ ಬಗ್ಗೆ ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿಯವರು ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ಆ ಬಳಿಕ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕ್ಯಾಪ್ಟನ್ ಟೇಕ್ ಆಫ್ ಆಗಲಿಲ್ಲ. ಈ ವೇಳೆ ರೆವಾರಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿದರು ಎಂದು ಟ್ವೀಟ್ ಮಾಡಿದೆ. 

ರಾಹುಲ್ ಚೆನ್ನಾಗಿಯೇ ಬ್ಯಾಟ್ ಬೀಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.