ಮಧ್ಯಪ್ರದೇಶ(ಜೂ.  10) ಈತ ಎಂಥಾ ಅದೃಷ್ಟವಂತ! ಒಂದೇ ಮದುವೆ ಮಂಟಪದಲ್ಲಿ ಕುಟುಂಬದವರು ಮತ್ತು ಸಂಬಂಧಿಕರ ಎದುರಿನಲ್ಲಿಯೇ ಡಬಲ್ ಮದುವೆ ಆಗಿದ್ದಾನೆ .

ಮಧ್ಯಪ್ರದೇಶದ ಬಿತುಲ್ ನಿವಾಸಿ ಸಂದೀಪ್ ಉಯ್ಕೆ ಡಬಲ್ ಮದುವೆ ಗಿಟ್ಟಿಸಿಕೊಂಡವ.  ಜುಲೈ  8 ರಂದು ಒಂದೇ ಮಂಟಪದಲ್ಲಿ ಎರಡು ಮದುವೆಯಾಗಿದ್ದಾನೆ. ಇದು ಹೇಗೆ ಸಾಧ್ಯವಾಯಿತು ಎಂದು ಜಿಲ್ಲಾಡಳಿತ ತನಿಖೆಯನ್ನು ಮನಡೆಸುತ್ತಿದೆ.

ಖಾಸಗಿ ಕ್ಷಣ ಹಂಚಿಕೊಂಡಿದ್ದ ಬಾಲಿವುಡ್ ಜೋಡಿ ಬೇರೆ ಬೇರೆ

ಕೇರಿಯಾ ಹಳ್ಳಿಯ ಬುಟಕಟ್ಟು ಜನಾಂಗದ ಹುಡುಗ ಸಂದೀಪ್ ಇಬ್ಬರನ್ನು ಮದುವೆಯಾಗಿದ್ದಾನೆ.  ಒಬ್ಬಳು ಯುವತಿ ಹೊಸಂಗಾಬಾದ್ ಜಿಲ್ಲೆಯವಳಾಗಿದ್ದರೆ ಇನ್ನೊಬ್ಬಳು ಕೋಯಲಾರಿ ಹಳ್ಳಿಯವಳು . 

ಭೋಪಾಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಸಂದೀಪ್ ಗೆ ಹೊಸಂಗಾಬಾದ್ ಜಿಲ್ಲೆಯ ಯುವತಿಯೊಂದಿಗೆ ಸ್ನೇಹವಾಗಿದೆ.  ಇದು ಯುವಕನ ಕುಟುಂಬಕ್ಕೆ ಗೊತ್ತಾಗಿ ಆತನಿಗೆ  ಕೋಯಲಾರಿ ಹಳ್ಳಿ ಹುಡುಗಿಯ ಜತೆ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.   ಇದು ವಿವಾದಕ್ಕೆ ಕಾರಣವಾಗಿದ್ದು ಮೂರು  ಕುಟುಂಬದವರು ಪಂಚಾಯತ್ ಮೊರೆ ಹೋಗಿದ್ದಾರೆ.

ರೇವತಿ ಕೈಯಲ್ಲಿ ನಿಖಿಲ್ ಹೆಸರಿನ ಮೆಹಂದಿ ರಂಗು

ಇಬ್ಬರು ಯುವತಿಯರು ಸಂದೀಪ್ ಮದುವೆಯಾಗಲು ಒಪ್ಪಿದ್ದು ಒಟ್ಟಿಗೆ ಜೀವನ ನಡೆಸುತ್ತೇವೆ ಎಂದು ಹೇಳಿದ್ದಾರೆ. ಇದಾದ ಮೇಲೆ ಇಬ್ಬರನ್ನು ಮದುವೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬರಲಾಗಿದೆ.

ಎಲ್ಲ ಸಂಪ್ರದಾಯದಂತೆ ಒಂದೇ ದಿನ ಇಬ್ಬರನ್ನು ಒಂದೇ ವೇಳೆ ಸಂದೀಪ್ ಮದುವೆಯಾಗಿದ್ದಾನೆ. ಕೊರೋನಾ ಇದ್ದ ಕಾರಣಕ್ಕೆ ಎಲ್ಲ ರೀತಿಯ ಪರವಾನಗಿ ಪಡೆದುಕೊಳ್ಳಲಾಗಿತ್ತು ಎಂದು ಪಂಚಾಯಿತಿ ಉಪಾಧ್ಯಕ್ಷ ಮಿಶ್ರಿಲಾಲ್ ಪರಾಟೆ ಹೇಳಿದ್ದಾರೆ. ಆದರೆ ಈ ಮದುವೆ ಬಗ್ಗೆ ಆಡಳಿತಕ್ಕೆ ಮಾಹಿತಿ ಇಲ್ಲ ಎಂದು ತಹಶೀಲ್ದಾರ್ ಮೋನಿಕಾ ವಿಶ್ವಕರ್ಮ ತಿಳಿಸಿದ್ದು ಮದುವೆ ಬಗ್ಗೆ ತನಿಖೆ ಮಾಡಲು ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.