ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ವಿಡಿಯೋದಲ್ಲಿ ಇಬ್ಬರು ಹುಡುಗಿಯರು ತಮ್ಮ ಕೋಣೆಯ ಬಾಗಿಲು ಮುಚ್ಚಿ ಟ್ವಿರ್ಕಿಂಗ್ ಡಾನ್ಸ್ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕೋಣೆಗೆ ಬಂದ ತಾಯಿ ಮಕ್ಕಳ ಅವತಾರ ಕಂಡು ಅವಕ್ಕಾಗಿದ್ದರೆ. ಅಲ್ಲದೇ ಕೋಪ ತಡೆಯಲಾಗದೆ ಇಬ್ಬರೂ ಮಕ್ಕಳಿಗೆ ಚಪ್ಪಲಿ ಕಳಚಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಮಕ್ಕಳು ತಮ್ಮ ಕೋಣೆಯಲ್ಲಿ ಫೋನ್ ಸಂಭಾಷಣೆ ನಡೆಸುವುದು, ಡಾನ್ಸ್ ಮಾಡುವುದು ಸಾಮಾನ್ಯ. ಆದರೆ ಈ ಸಂದರ್ಭದಲ್ಲಿ ಹಿರಿಯರ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ಹೊಡೆತ ತಿನ್ನುವುದು ಖಚಿತ.

ಇಬ್ಬರೂ ಹುಡುಗಿಯರು ತಮ್ಮ ಕೋಣೆಯಲ್ಲಿ ಗಟ್ಟಿಯಾದ ಧ್ವಿನಿಯಲ್ಲಿ ಮ್ಯೂಸಿಕ್ ಇಟ್ಟು ಟ್ವಿರ್ಕಿಂಗ್ ಡಾನ್ಸ್ ಮಾಡುವುದರಲ್ಲಿ ತಲ್ಲೀನರಾಗಿದ್ದರು. ಎಲ್ಲವೂ ಸರಿಯಗೇ ಇತ್ತು. ಆದರೆ ತಾಯಿ ಕೋಣೆಯೊಳಗೆ ಬರುತ್ತಿದ್ದಂತೆಯೇ ಇಡೀ ಚಿತ್ರಣವೇ ಬದಲಾಗಿದೆ. ಮಕ್ಕಳು ವಿಚಿತ್ರವಾಗಿ ಡಾನ್ಸ್ ಮಾಡುತ್ತಿರುವುದನ್ನು ಕಂಡು ಕೋಪಗೊಂಡ ತಾಯಿ ಆ ಕೂಡಲೇ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಇಬ್ಬರಿಗೂ ಹೊಡೆಯಲಾರಂಭಿಸುತ್ತಾರೆ. ಸದ್ಯ ಈ ವಿಡಿಯೋ ಜಾಲಾತಾಣಗಳಲ್ಲಿ ವೈರಲ್ ಆಗಿದೆ. 11 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ವಿಚಾರವೂ ತಿಳಿದು ಬಂದಿಲ್ಲ.