ಬೆಂಗಳೂರು : ಅಪಾರ್ಟ್’ಮೆಂಟ್  ಫ್ಲಾಟ್’ನಿಂದ ಯಾದಗಿರಿ ಮೂಲದ ಮೌನೇಶ ಹಾಗೂ ತಾಯಿ ಸುಂದರಮ್ಮ ಎನ್ನುವವರು ಬಿದ್ದು ಮೃತರಾಗಿದ್ದಾರೆ. ಬೆಂಗಳೂರು ಹೊರವಲಯದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಡಿಸಿಆರ್’ಬಿ ಇನ್ಸ್’ಪೆಕ್ಟರ್ ಆಗಿದ್ದ ಚಂದ್ರಪ್ಪನ ತಂಗಿ ಹಾಗೂ ಮೌನೇಶ್ ನಡುವೆ ಪ್ರೇಮಾಂಕುರವಾಗಿದ್ದು, ಆಕೆ ಮನೆ ಬಿಟ್ಟು ಹೋಗಿದ್ದು, ಮೌನೇಶ್ ಜೊತೆಯೆ ಆಕೆ ತೆರಳಿದ್ದಳು ಎನ್ನಲಾಗಿದೆ.

ಇನ್ನು ಈ ಸಂಬಂಧ ಚಂದ್ರಪ್ಪ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ತಂಗಿ ಕಾಣೆಯಾಗಿರುವುದಾಗಿ ದೂರು ನೀಡಿದ್ದರು. ಅಲ್ಲದೇ ಮೌನೇಶ್ ಹಾಗೂ ಅವರ ತಾಯಿಯನ್ನು ತಂದು ಅಪಾರ್ಟ್’ಮೆಂಟ್’ನಲ್ಲಿ ಕೂಡಿ ಹಾಕಿದ್ದರು ಎನ್ನಲಾಗಿದೆ. ಇಂದು ಬೆಳ್ಳಂಬೆಳಗ್ಗೆ ಮೌನೇಶ್ ಹಾಗೂ ಆತನ ತಾಯಿ ಬಿದ್ದು ಮೃತಪಟ್ಟಿದ್ದು, ಇದು ಕೊಲೆಯೋ ಆತ್ಮಹತ್ಯೆಯೋ ಎನ್ನುವ ಶಂಕೆ ಮೂಡಿದೆ. ಕಾಡುಗೋಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.