- ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯಾ ದಾಳಿ
- ದಾಳಿಯಲ್ಲಿ 8 ರಿಂದ 10 ಕೆಜಿ ಸ್ಫೋಟಕಗಳ ಬಳಕೆ
ಕ್ವೆಟ್ಟಾ[ಜು.14]: ಪಾಕಿಸ್ತಾನದ ನೈರುತ್ಯ ಪ್ರಾಂತ್ಯದಲ್ಲಿ ಚುನಾವಣಾ ರ‍್ಯಾಲಿ ನಡೆಯುತ್ತಿರುವ ಸಂದರ್ಭದಲ್ಲಿ ಭೀಕರ ಬಾಂಬ್ ಸ್ಫೋಟದ ಪರಿಣಾಮವಾಗಿ 128 ಮಂದಿ ಮೃತಪಟ್ಟು 150 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಜುಲೈ 25 ರಂದು ದೇಶಾದ್ಯಂತ ನಡೆಯುವ ಚುನಾವಣಾ ಅಂಗವಾಗಿ ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಲ್ಲಿ ಈಗ ತಾನೆ ಅಸ್ತಿತ್ವಕ್ಕೆ ಬಂದ ಬಲೂಚಿಸ್ತಾನ ಅವಾಮಿ ಪಕ್ಷದ ಅಭ್ಯರ್ಥಿಯೊಬ್ಬರು ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯಾ ದಾಳಿ ನಡೆದಿದೆ. ದಾಳಿಯಲ್ಲಿ 8 ರಿಂದ 10 ಕೆಜಿ ಸ್ಫೋಟಕಗಳನ್ನು ಬಳಸಲಾಗಿದೆ. ಸ್ಫೋಟದಲ್ಲಿ ಕೆಲವು ಹಿರಿಯ ರಾಜಕೀಯ ನಾಯಕರು ಕೂಡ ಮೃತಪಟ್ಟಿದ್ದಾರೆ.
ಸ್ಫೋಟದ ತೀವ್ರತೆಯಿಂದ ರಸ್ತೆಯಲ್ಲ ರಕ್ತಸಿಕ್ತವಾಗಿತ್ತು. ಮಾಂಸದ ತುಂಡೆಲ್ಲ ದಾರಿಯುದ್ದಕ್ಕೂ ಬಿದ್ದಿದ್ದವು. ಪರಿಸ್ಥಿತಿ ತೀರ ಭಯಾನಕವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದಾಳಿಯ ಹೊಣೆಯನ್ನು ಇಲ್ಲಿಯವರೆಗೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವೇ ದಿನಗಳ ಹಿಂದ ಅದೇ ಪ್ರಾಂತ್ಯದ ಬನ್ನು ಎಂಬಲ್ಲಿ ಪ್ರಚಾರ ಸಭೆ ನಡೆಯುತ್ತಿದ್ದಾಗ ನಡೆದ ಬಾಂಬ್ ಸ್ಫೋಟದಿಂದ ಐವರು ಮೃತಪಟ್ಟು 37 ಮಂದಿ ಗಾಯಗೊಂಡಿದ್ದರು.

Last Updated 14, Jul 2018, 10:55 AM IST