ಬೆಂಗಳೂರು (ನ. 07): ಬೆಳಕಿನ ಹಬ್ಬ ದೀಪಾವಳಿ ಇಬ್ಬರ ಬದುಕನ್ನು ಕತ್ತಲಾಗಿಸಿದೆ. ಬೆಂಗಳೂರಲ್ಲಿ ಇಬ್ಬರು ಮಕ್ಕಳ ಪಾಲಿಗೆ ಶಾಶ್ವತ ಅಂಧಕಾರ ತಂದೊಡ್ಡಿದೆ. 

ದೀಪಾವಳಿ ಹಬ್ಬದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ನಿನ್ನೆ ಒಂದೇ ದಿನ ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ‌ ಡಿಜೆ ಹಳ್ಳಿಯ 13 ವರ್ಷದ ಸಹೀದಾ ಬಾನು ಪಟಾಕಿ ಅವಾಂತರದಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾಳೆ.

ಇನ್ನು ಬೊಮ್ಮನಹಳ್ಳಿಯಲ್ಲಿ ಮನೆಯ ಮುಂದೆ ಪಟಾಕಿ ಸಿಡಿಸೋದನ್ನ ನೋಡುತ್ತ ನಿಂತಿದ್ದ ಆರು ವರ್ಷದ ಬಾಲಕಿ ದಿವ್ಯಾಗೆ ರಸ್ತೆಯಲ್ಲಿಟ್ಟಿದ್ದ ಪಟಾಕಿ ಸಿಡಿದು ಎಡಕಣ್ಣಿನ ರೆಟಿನಾಗೆ  ತೀವ್ರ ಪೆಟ್ಟಾಗಿದೆ..ಇಬ್ಬರು‌ ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.