ಗೋವಾ(ಅ.07): ದೇಶದ ಅತ್ಯುತ್ತಮ ಪರ್ಫ್ಯೂಮರ್ ಎನ್ನಲಾದ ಮೋನಿಕಾ ಘುರ್ಡೆ ಗೋವಾದ ತಮ್ಮ ನಿವಾಸದಲ್ಲಿ ಭೀಕರವಾಗಿ ಹತ್ಯೆಯಾಗಿದ್ದಾರೆ.

ಬೆತ್ತಲಾದ ಮೃತದೇಹ, ಕಟ್ಟಿದ ಕೈಕಾಲುಗಳು ಇದು ಪೊಲೀಸರು ಮನೆಗೆ ಎಂಟ್ರಿಯಾದಾಗ ಕಂಡ ದೃಶ್ಯ. ಮೋನಿಕಾ ಒಂಟಿಯಾಗಿ ಜೀವಿಸುತ್ತಿದ್ದರು. ಈ ಸಂದರ್ಭ ಯಾರೋ ಆಗಂತುಕರು ದರೋಡೆ ಮಾಡಿ, ಕೈಕಾಲು ಕಟ್ಟಿ, ಅತ್ಯಾಚಾರ ಮಾಡಿ ಕೊಲೆಗೈದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಯಾರು ಈ ಮೋನಿಕಾ..?: ಮೋನಿಕಾ ದೇಶದ ಸ್ವತಂತ್ರ್ಯ ಸುಗಂಧ ದ್ರವ್ಯ ಉತ್ಪಾದಕಿಯಾಗಿದ್ದಾರೆ. ಗೋವಾ ಮೂಲದವರಾದರೂ ಚೆನ್ನೈನಲ್ಲಿ, 'MO Lab'  ಅನ್ನ ಸ್ಥಾಪಿಸಿದ್ದರು.  ಪರ್ಫ್ಯೂಮರ್ ಆಗುವುದಕ್ಕೂ ಮುನ್ನ ಮೋನಿಕಾ ಫೋಟೋಗ್ರಾಫರ್ ಮತ್ತು ಗ್ರಾಫಿಕ್ಸ್ ಡಿಸೈನರ್ ಆಗಿ ನೈಪುಣ್ಯತೆ ಪಡೆದಿದ್ದರು.

ಕೃಪೆ: ಇಂಡಿಯಾ ಟುಡೇ