ಇಸ್ಲಾಮಾಬಾದ್(ಆ.16): ಭಾರತದಲ್ಲಿರುವ ಫ್ಯಾಸಿಸ್ಟ್ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು, ಇದು ಯಶಸ್ವಿಯಾಗುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

"

370ನೇ ವಿಧಿಯನ್ನು ತೆಗೆದು ಹಾಕಿರುವುದು ಉಗ್ರಗಾಮಿ ಕ್ರಮ ಎಂದಿರುವ ಇಮ್ರಾನ್, ಫ್ಯಾಸಿಸ್ಟ್ ಮನೋಭಾವದ ಪ್ರಧಾನಿ ಮೋದಿ ಅವರು ಈ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ಹಿಂದೂ ಉಗ್ರವಾದಿ ನೀತಿ ಅನುಸರಿಸುತ್ತಿರುವ ಮೋದಿ ಸರ್ಕಾರ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಕಾಶ್ಮಿರಿಗರ ಮುಂದೆ ಮಂಡಿಯೂರಲಿದೆ ಎಂದು ಪಾಕ್ ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಕಾಶ್ಮೀರದಲ್ಲಿ ಮೋದಿ ಅವರ ಫ್ಯಾಸಿಸ್ಟ್ ತಂತ್ರ ವಿಫಲವಾಗಿದ್ದು, ಭವಿಷ್ಯದಲ್ಲಿ ಈ ನಿರ್ಧಾರಕ್ಕೆ ಭಾರತ ತಕ್ಕ ಬೆಲೆ ತೆರಲಿದೆ ಎಂದೂ ಇಮ್ರಾನ್ ತಮ್ಮ ಟ್ವೀಟ್'ನಲ್ಲಿ ಹರಿಹಾಯ್ದಿದ್ದಾರೆ.

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ಕುರಿತ ವಿಶ್ವ ಸಮುದಾಯದ ಮೌನವನ್ನು ಪ್ರಶ್ನಿಸಿರುವ ಇಮ್ರಾನ್, ನಿರ್ದಿಷ್ಟ ಪ್ರದೇಶವೊಂದರ ಜನರ ಅಳಲನ್ನು ಕೇಳಿಸಿಕೊಳ್ಳದಿರುವುದು ನಿಜಕ್ಕೂ ದುರದೃಷ್ಟಕರ ಎಂದು ಆರೋಪಿಸಿದ್ದಾರೆ.