ಅತ್ಯಾಚಾರ ಪ್ರಕರಣ : ರದ್ದಾಯ್ತು ನಟನ ಪುತ್ರನ ವಿವಾಹ

Mithun Chakraborty's son Mahaakshay's marriage cancelled
Highlights

ಅತ್ಯಾಚಾರ ಪ್ರಕರಣವೊಂದರ ಆರೋಪದ ಹಿನ್ನೆಲೆಯಲ್ಲಿ ಹಿರಿಯ ನಟರ ಪುತ್ರನೋರ್ವನ ಪುತ್ರನ ಮದುವೆ ನಿಂತಿದೆ. ಯುವತಿಯೊಬ್ಬಳು ದಾಖಲಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಪೊಲೀಸ್ ತಂಡ ಆಗಮಿಸಿದ್ದುದರಿಂದ ಮದುವೆ ರದ್ದುಮಾಡಲು ವಧುವಿನ ಕಡೆಯವರು ನಿರ್ಧರಿಸಿದರು.

ಚೆನ್ನೈ: ಹಿರಿಯ ನಟ ಮಿಥುನ್ ಚಕ್ರವರ್ತಿ ಮಗ ಮಹಾಕ್ಷಯ್ ಮದುವೆ ರದ್ದಾಗಿದೆ. ಯುವತಿಯೊಬ್ಬಳು ದಾಖಲಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಪೊಲೀಸ್ ತಂಡ ಆಗಮಿಸಿದ್ದುದರಿಂದ ಮದುವೆ ರದ್ದುಮಾಡಲು ವಧುವಿನ ಕಡೆಯವರು ನಿರ್ಧರಿಸಿದರು.

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಊಟಿಯಲ್ಲಿ ನಟನ ಹೋಟೆಲೊಂದರಲ್ಲಿ ವಿವಾಹಕ್ಕೆ ಶ್ಚಯಿಸಲಾಗಿತ್ತು. ಇನ್ನೊಂದೆಡೆ ಮಹಾಕ್ಷಯ್ ಮತ್ತು ಅವರ ತಾಯಿ ಯೋಗಿತಾ ಬಾಲಿ ಅವರಿಗೆ ದೆಹಲಿ ನ್ಯಾಯಾಲಯವೊಂದು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

loader