Asianet Suvarna News Asianet Suvarna News

ಇಟ್ಟಿಗೆ ಎತ್ತಲು ಬರಹೇಳಿ ಅಪ್ರಾಪ್ತೆಯ ರೇಪ್ ಮಾಡಿದ ಮುದುಕ

ಆರೋಪಿ ನಾಗಪ್ಪನು ಪಕ್ಕದ ಮನೆಯ 11 ವರ್ಷದ ಬಾಲಕಿಯನ್ನು ಇಟ್ಟಿಗೆ ಎತ್ತಲು ಸಹಾಯ ಮಾಡುವಂತೆ ಮನೆಗೆ ಕರೆಸಿಕೊಂಡಿರುತ್ತಾನೆ. ಮನೆಗೆ ಬಂದ ಬಾಲಕಿಯ ಮೇಲೆ ಶೌಚಾಲಯದಲ್ಲಿ ಅತ್ಯಾಚಾರಕ್ಕೆ ಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಬಾಲಕಿ ಕಿರುಚಿಕೊಂಡಿದ್ದು ಪರಾರಿಯಾಗಲು ಯತ್ನಿಸಿರುತ್ತಾಳೆ. ಕೂಗಿನ ಶಬ್ದ ಕೇಳಿ ಪಕ್ಕದ ಮನೆಯವರು ನಾಗಪ್ಪನನ್ನು ಹಿಡಿದುಹಾಕುತ್ತಾರೆ.

minor girl raped by 65 yr old man at anekal
  • Facebook
  • Twitter
  • Whatsapp

ಬೆಂಗಳೂರು(ಆ. 27): ಅಪ್ರಾಪ್ತ ಬಾಲಕಿಯ ಮೇಲೆ 65 ರ ವೃದ್ಧನೋರ್ವ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನಾಗಪ್ಪ(65) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚೂಡೇನಹಳ್ಳಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ.

ಆರೋಪಿ ನಾಗಪ್ಪನು ಪಕ್ಕದ ಮನೆಯ 11 ವರ್ಷದ ಬಾಲಕಿಯನ್ನು ಇಟ್ಟಿಗೆ ಎತ್ತಲು ಸಹಾಯ ಮಾಡುವಂತೆ ಮನೆಗೆ ಕರೆಸಿಕೊಂಡಿರುತ್ತಾನೆ. ಮನೆಗೆ ಬಂದ ಬಾಲಕಿಯ ಮೇಲೆ ಶೌಚಾಲಯದಲ್ಲಿ ಅತ್ಯಾಚಾರಕ್ಕೆ ಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಬಾಲಕಿ ಕಿರುಚಿಕೊಂಡಿದ್ದು ಪರಾರಿಯಾಗಲು ಯತ್ನಿಸಿರುತ್ತಾಳೆ. ಕೂಗಿನ ಶಬ್ದ ಕೇಳಿ ಪಕ್ಕದ ಮನೆಯವರು ನಾಗಪ್ಪನನ್ನು ಹಿಡಿದುಹಾಕುತ್ತಾರೆ. 2 ದಿನದ ರಾಜಿ ಪಂಚಾಯಿತಿ ವಿಫಲವಾದ ಬಳಿಕ ಗ್ರಾಮಸ್ಥರು ಆನೇಕಲ್ ಪೊಲೀಸರಿಗೆ ನಿನ್ನೆ ತಡರಾತ್ರಿ ದೂರು ನೀಡಿ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿರುತ್ತಾರೆ. ಇದೀಗ ಆನೇಕಲ್ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.

Follow Us:
Download App:
  • android
  • ios