ಡೆಹ್ರಾಡೂನ್‌ ಗ್ಯಾಂಗ್‌ರೇಪ್‌: 9 ಮಂದಿ ಬಂಧನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 19, Sep 2018, 8:52 AM IST
Minor gang rape at Dehradun boarding school  9 including 4 minor boys arrested
Highlights

ಕೆಲ ದಿನಗಳ ಹಿಂದೆ ನಾಲ್ವರು ಹುಡುಗರು ಅತ್ಯಾಚಾರ ಎಸಗಿ ತಾನು ಗರ್ಭಿಣಿಯಾಗಿರುವ ಬಗ್ಗೆ ವಿದ್ಯಾರ್ಥಿನಿ ಶಾಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಆದರೆ, ವಿಷಯವನ್ನು ಪೊಲೀಸರಿಗೆ ತಿಳಿಸುವುದರ ಬದಲು ಶಾಲಾಡಳಿತ ಮತ್ತು ಹೆತ್ತವರು ಹಲವು ಔಷಧಿಗಳನ್ನು ನೀಡಿ ಹುಡುಗಿಗೆ ಗರ್ಭಪಾತಕ್ಕೆ ಯತ್ನಿಸಿದ್ದರು. 

ಡೆಹ್ರಾಡೂನ್‌[ಸೆ.19]: ಇಲ್ಲಿನ ವಸತಿ ಶಾಲೆಯೊಂದರಲ್ಲಿ 16ರ ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಸಾಕ್ಷ್ಯ ನಾಶ ಮಾಡಿದ ಆರೋಪದಲ್ಲಿ ಶಾಲೆಯ ಆಡಳಿತ ಮಂಡಳಿಯ ಐವರನ್ನು ಕೂಡಾ ಬಂಧಿಸಲಾಗಿದೆ.

ಕೆಲ ದಿನಗಳ ಹಿಂದೆ ನಾಲ್ವರು ಹುಡುಗರು ಅತ್ಯಾಚಾರ ಎಸಗಿ ತಾನು ಗರ್ಭಿಣಿಯಾಗಿರುವ ಬಗ್ಗೆ ವಿದ್ಯಾರ್ಥಿನಿ ಶಾಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಆದರೆ, ವಿಷಯವನ್ನು ಪೊಲೀಸರಿಗೆ ತಿಳಿಸುವುದರ ಬದಲು ಶಾಲಾಡಳಿತ ಮತ್ತು ಹೆತ್ತವರು ಹಲವು ಔಷಧಿಗಳನ್ನು ನೀಡಿ ಹುಡುಗಿಗೆ ಗರ್ಭಪಾತಕ್ಕೆ ಯತ್ನಿಸಿದ್ದರು. ಬಳಿಕ ಶಾಲಾ ಸಿಬ್ಬಂದಿ ಹುಡುಗಿಯನ್ನು ಗರ್ಭಪಾತಕ್ಕಾಗಿ ನಸಿಂಗ್‌ ಹೋಂ ಒಂದಕ್ಕೆ ದಾಖಲಿಸಿದ್ದರು. ಜೊತೆಗೆ ಘಟನೆಯ ಬಗ್ಗೆ ಯಾರಲ್ಲೂ ಹೇಳದಂತೆ ಶಾಲಾಡಳಿತ ಹುಡುಗಿಯ ಮೇಲೆ ತೀವ್ರ ಒತ್ತಡ ಹೇರಿತ್ತು.

ಆದರೆ ಬಳಿಕ ಪ್ರಕರಣ ಬೆಳಕಿಗೆ ಬಂದು, ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.


 
 

loader