ಭ್ರಮೆಯಲ್ಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 15, Jul 2018, 1:39 PM IST
Minister UT Khader Slams PM Narendra Modi
Highlights

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಮಸ್ಯೆಗಳನ್ನು ನಿವಾರಿಸುವ ಭ್ರಮೆಯಲ್ಲಿದ್ದರು. ದೇಶದಲ್ಲಿ ಕಪ್ಪುಹಣ ಈ ಹಿಂದಿಗಿಂತಲೂ ಕೂಡ ಜಾಸ್ತಿಯಾಗಿದೆ ಎಂದು ಯು.ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ. 
 

ಬೆಂಗಳೂರು :  ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಚಿವ ಯುಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ. 

ದೇಶದ ಸಮಸ್ಯೆಗಳನ್ನು ನಿವಾರಿಸುವ ಭ್ರಮೆಯಲ್ಲಿದ್ದರು ಅವರು. ಆದರೆ ದೇಶದಲ್ಲಿ ಈಗ ಸಮಸ್ಯೆ ಹೆಚ್ಚಾಗಿದೆ.  ಕಪ್ಪುಹಣ ಈ ಹಿಂದಿಗಿಂತಲೂ ಕೂಡ ಜಾಸ್ತಿಯಾಗಿದೆ ಎಂದು ಯು.ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ. 

ಪ್ರಧಾನಿ ಮೋದಿ ಅವರು ಪಾಕಿಸ್ತಾನಕ್ಕೆ ಬುದ್ದಿ ಕಲಿಸುತ್ತೇನೆ ಎಂದು ಭಾಷಣ ಮಾಡುತ್ತಾರೆ. ಪಾಕಿಸ್ತಾನಕ್ಕೆ ಹೋಗಿ ಚಹಾ ಕುಡಿದು ಬರುತ್ತಾರೆ. ಪಾಕಿಸ್ತಾನಕ್ಕೆ ಹೋಗಲು ಅವರಿಗೆ ಸಮಯ ಇದೆ. ಆದರೆ ಪಾಕಿಸ್ತಾನ ಕೊಂದ ಸೈನಿಕರ ಮನೆಗೆ ಹೋಗಲು ಸಮಯವಿಲ್ಲ. 

ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡಿಲ್ಲ. ಯುವಕರಿಗೆ ಕೆಲಸ ಕೊಡಿಸುವ ಯೋಗ್ಯತೆ ನಿಮಗಿಲ್ಲ. ಶೈಕ್ಷಣಿಕ ಸಾಲವನ್ನಾದರೂ ಕೂಡಲೇ ಮನ್ನಾ ಮಾಡಿ.  ನಿರುದ್ಯೋಗಿಗಳನ್ನು ಬ್ಯಾಂಕ್ ಸಿಬ್ಬಂದಿ ಪೀಡಿಸಿದರೆ ಯುವ ಕಾಂಗ್ರೆಸ್ ಸಹಿಸುವುದಿಲ್ಲ  ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯುಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.

loader