ನವದೆಹಲಿ, [ನ.02]: ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ  ಮಾಜಿ ಸಚಿವ ಎಂಜೆ ಅಕ್ಬರ್ ವಿರುದ್ದ ಮತ್ತೊಮ್ಮೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. 

ಭಾರತದ ಹಲವು ಪತ್ರಕರ್ತೆಯರು ಆರೋಪ ಹೊರೆಸಿದ ಬಳಿಕ ಈಗ ಯುಎಸ್ ಮೂಲದ ಪತ್ರಕರ್ತೆಯೊಬ್ಬರು ಮಾಜಿ ಸಂಪಾದಕರೂ ಆಗಿರುವ  ಅಕ್ಬರ್ ವಿರುದ್ಧ ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದಾರೆ. 

#MeToo ನಿಂದ ಬಿತ್ತು ಏಟು : ಕೇಂದ್ರ ಸಚಿವ ಎಂ.ಜೆ. ಅಕ್ಬರ್ ರಾಜೀನಾಮೆ

ಎಂಜೆ ಅಕ್ಬರ್ ಅವರೊಂದಿಗೆ ಈ ಹಿಂದೆ ಸಹದ್ಯೋಗಿಯಾಗಿದ್ದ ಪ್ರಿಯಾ ರಮಣಿ ಎಂಬುವರು ಮೊದಲಿಗೆ ಟ್ವಿಟ್ಟರ್ನಲ್ಲಿ #metoo ಅಭಿಯಾನದ ಅಡಿ ಎಂಜೆ ಅಕ್ಬರ್ ಅವರ ಕಾಮಚೇಷ್ಟೆಗಳ ಬಗ್ಗೆ ವಿವರವಾಗಿ ಬರೆದುಕೊಂಡಿದ್ದರು. 

ಈಗ ಸರಿ ಸುಮಾರು 23 ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ಅಕ್ಬರ್ ಅವರು ನನ್ನ ಬಟ್ಟೆ ಹರಿದು ಹಾಕಿ, ನನ್ನ ಮೇಲೆ ಬಲಾತ್ಕಾರ ಮಾಡಿದರು ಎಂದು ಯುಎಸ್ ಮೂಲದ ಭಾರತೀಯ ಸಂಜಾತೆ ಪತ್ರಕರ್ತೆ ಪಲ್ಲವಿ ಗೊಗಾಯಿ ಅವರು ಆರೋಪಿಸಿದ್ದಾರೆ.

ಈ ಮೊದಲು  ಎಂ.ಜೆ. ಅಕ್ಬರ್ ಅವರು ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದೀಗ ನ್ಯಾಷನಲ್​ ಪಬ್ಲಿಕ್​​ ರೇಡಿಯೋ ಎಡಿಟರ್​​ ಪಲ್ಲವಿ ಗೊಗೋಯ್ ಅವರು​ ಅಕ್ಬರ್​ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದು,  ಅಕ್ಬರ್  ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ.