Asianet Suvarna News Asianet Suvarna News

ತಮ್ಮ ಸರ್ಕಾರ ಟೀಕಿಸಿದ ಕಾಂಗ್ರೆಸ್ ನಾಯಕ, ಕರ್ನಾಟಕಕ್ಕೆ ಮೋದಿ ನೆರವಿನ ಭರವಸೆ; ನ.23ರ ಟಾಪ್ 10 ಸುದ್ದಿ!

ಮುಂಬೈ ದಾಳಿ ಬಳಿಕ ಕಾಂಗ್ರೆಸ್ ನೇತತ್ವದ ಯುಪಿ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿತ್ತು ಎಂದು ತಮ್ಮ ಸರ್ಕಾರವನ್ನೇ ನಾಯಕ ಟೀಕಿಸಿದ್ದಾರೆ. ಮೋದಿ ನಿರ್ಧಾರದಿಂದ ಅರೆಬೆಂದ ಕನಸುಗಳು ನಾಶವಾಗಿದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ. ಕರ್ನಾಟಕ ಮಳೆ ಹಾಗೂ ಪ್ರವಾಹಕ್ಕೆ ಕೇಂದ್ರದಿಂದ ನೆರವಿನ ಭರವಸೆ ಸಿಕ್ಕಿದೆ.  ಮರುಡೇಶ್ವರ ಮೇಲೆ ಐಸಿಸಿ ಕಣ್ಣು, ಅಪ್ಪು ನಮನ ಕಾರ್ಯಕ್ರಮ ನಿರೂಪರಣೆಗೆ ಒಂದು ರೂಪಾಯಿ ಚಾರ್ಜ್ ಮಾಡಿಲ್ಲ ಅಪರ್ಣ ಸೇರಿದಂತೆ ನವೆಂಬರ್ 23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Manish tewari book on mumbai terror attack to Karnatak Rains top 10 News of November 23 ckm
Author
Bengaluru, First Published Nov 23, 2021, 4:29 PM IST

Mumbai attack: ಮಾತಿಗಿಂತ ಕಾರ್ಯ ಮಾತನಾಡಬೇಕಿತ್ತು, 26/11 ದಾಳಿಯಲ್ಲಿ UPA ವೈಫಲ್ಯ ಟೀಕಿಸಿದ ಕಾಂಗ್ರೆಸ್ ನಾಯಕ ತಿವಾರಿ!

Manish tewari book on mumbai terror attack to Karnatak Rains top 10 News of November 23 ckm

 ಕಾಂಗ್ರೆಸ್(Congress) ನಾಯಕರು ಒಬ್ಬರ ಹಿಂದೆ ಒಬ್ಬರು ಪುಸ್ತಕ ಬಿಡುಗಡೆ(Book Laucnh) ಮಾಡುತ್ತಿದ್ದಾರೆ. ಸಲ್ಮಾನ್ ಖುರ್ಷಿದ್ ವಿವಾದಾತ್ಮಕ ಪುಸ್ತಕದ ಬಳಿಕ ಇದೀಗ ಮನೀಶ್ ತಿವಾರಿ(Manish Tewari ) ಸರದಿ. ಇದೀಗ ತಿವಾರಿ ಪುಸ್ತಕ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ಈ ಪುಸ್ತಕದಲ್ಲಿ ಕಾಂಗ್ರೆಸ್ ನಾಯಕ ತಮ್ಮದೇ ಸರ್ಕಾರವನ್ನು ಟೀಕಿಸಿದ್ದಾರೆ. 26/11ರ ಮುಂಬೈ ದಾಳಿ(2008 Mumbai attacks) ಬಳಿಕ  UPA ಸರ್ಕಾರ ತೋರಿದ ನಿಷ್ಕ್ರೀಯತೆಯನ್ನು ಮನೀಶ್ ತಿವಾರಿ ಟೀಕಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದೆ.

PM Narendra Modi ಒಂದು ಘೋಷಣೆಯಿಂದ ಅರೆಬೆಂದ ಕನಸುಗಳು ನಾಶ: ಕ್ಯಾಪ್ಟನ್‌ ಅಮರಿಂದರ್!

Manish tewari book on mumbai terror attack to Karnatak Rains top 10 News of November 23 ckm

ನವೆಂಬರ್‌ 19 ಗುರುನಾನಕ್‌  ಜಯಂತಿಯಂದೇ ಪ್ರಧಾನಿ ಮೋದಿ ಕೃಷಿ ಕಾಯ್ದೆ ಹಿಂಪಡೆಯುವುದಾಗಿ (Farm Laws Repealed) ಘೋಷಿಸಿದ್ದರು. ಸರ್ಕಾರ ಅಂತಿಮವಾಗಿ ರೈತರ ಪ್ರತಿಭಟನೆಗೆ ತಲೆಬಾಗಿದ್ದಕ್ಕೆ ವಿರೋಧ ಪಕ್ಷಗಳು (opposition Parties) ಪ್ರತಿಕ್ರಿಯಿಸಿದ್ದು ಅಭಿನಂದನೆ ಕೂಡ ಸಲ್ಲಿಸಿದ್ದವು.

Karnataka Rain | ಸಿಎಂ ಬಳಿ ಕೇಂದ್ರದಿಂದ ಅಗತ್ಯ ನೆರವಿನ ಭರವಸೆ ನೀಡಿದ ಪ್ರಧಾನಿ ಮೋದಿ

Manish tewari book on mumbai terror attack to Karnatak Rains top 10 News of November 23 ckm

ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ  ಭಾರಿ ಪ್ರಮಾಣದಲ್ಲಿ ಮಳೆ (Rain) ಸುರಿಯುತ್ತಿದ್ದು ಅಪಾರ ಪ್ರಮಾಣದ ನಷ್ಟವನ್ನುಂಟು ಮಾಡಿದೆ. ಬೆಂಗಳೂರು ನಗರದಲ್ಲಿ  ಪ್ರವಾಹ ಸದೃಶ ವಾತಾವರಣ ನಿರ್ಮಾಣವಾಗಿದೆ

IPL 2022: ಈ ಐವರು ಬ್ಯಾಟರ್‌ಗಳು RCB ಪರ ಎಬಿ ಡಿವಿಲಿಯರ್ಸ್‌ ಸ್ಥಾನ ತುಂಬಬಲ್ಲರು..!

Manish tewari book on mumbai terror attack to Karnatak Rains top 10 News of November 23 ckm

ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ (IPL 2022) ಟೂರ್ನಿಗೆ ಈಗಿನಿಂದಲೇ ಸಿದ್ದತೆಗಳು ಆರಂಭವಾಗಿವೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಪಾಲಿಗೆ ದಶಕಗಳಿಂದ ಆಪತ್ಭಾಂಧವನೆನಿಕೊಂಡಿದ್ದ ಎಬಿ ಡಿವಿಲಿಯರ್ಸ್ (Ab De Villiers) ದಿಢೀರ್ ಎನ್ನುವಂತೆ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

Puneeth Rajkumar: ಅಪ್ಪು ನಮನ ನಿರೂಪಣೆಗೆ ಅಪರ್ಣಾ ಪಡೆದ ಸಂಭಾವನೆ ಇದು!

Manish tewari book on mumbai terror attack to Karnatak Rains top 10 News of November 23 ckm

ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜ್‌ಕುಮಾರ್ (Puneeth Rajkumar) ಕೊಡುಗೆ ಅಪಾರ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಒಂದು ದೊಡ್ಡ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕನ್ನಡ ಮಾತ್ರವಲ್ಲದೇ ತೆಲಗು (Telugu) ಮತ್ತು ತಮಿಳು (Tamil) ಚಿತ್ರರಂಗದ ಗಣ್ಯರೂ ನುಡಿ ನಮನದಲ್ಲಿ ಭಾಗಿಯಾಗಿದ್ದರು. ರಾಜಕಾರಣಿಗಳು ಕೂಡ ಅಪ್ಪು ಬಗ್ಗೆ ಮನ ಬಿಚ್ಚಿ ಮಾತನಾಡಿದ್ದರು. ಈ ಕಾರ್ಯಕ್ರವನ್ನು ನಿರೂಪಿಸಿದ ಆ್ಯಂಕರ್, ನಟಿ ಅಪರ್ಣಾ (Anchor Aparna) ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಗೊತ್ತಾ? ಸಾಮಾನ್ಯ ಕಾರ್ಯಕ್ರಮ ಎಂದರೆ ಹತ್ತಿರ ಅಂದರೂ 1 ಲಕ್ಷ ಪಡೆಯುತ್ತಾರೆ ಇವರು. ಆದರೆ ಅಪ್ಪು ನಮನ ಕಾರ್ಯಕ್ರಮಕ್ಕೆ?

Terror Act: ಮುರುಡೇಶ್ವರ ಶಿವನ ಮೇಲಿದ್ಯಾ ಐಸಿಸ್ ಉಗ್ರರ ಕೆಂಗಣ್ಣು?

Manish tewari book on mumbai terror attack to Karnatak Rains top 10 News of November 23 ckm

ಉತ್ತರ ಕನ್ನಡ ಜಿಲ್ಲೆ(Uttara Kannada)  ಪ್ರಸಿದ್ಧ ಪ್ರವಾಸಿತಾಣ ಮುರ್ಡೇಶ್ವರದ (Murdeshwar)ಶಿವನ ಪ್ರತಿಮೆಯ ಮೇಲೆ ಐಸಿಸ್ ನ ವಕ್ರದೃಷ್ಟಿ ಬಿದ್ದಿದೆಯೇ ಎನ್ನುವ ಪ್ರಶ್ನೆ ಕಾಡಲು ಆರಂಭಿಸಿದೆ. ಅಲ್ಲಿನ ಶಿವನ ಪ್ರತಿಮೆಯ ತಲೆಯ ಭಾಗವನ್ನು ಕತ್ತರಿಸಿ ಐಸಿಸ್ ಧ್ವಜ ಹೋಲುವ ಧ್ವಜವನ್ನು ಅಳವಡಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Ramayan Expressನಲ್ಲಿ ಕೇಸರಿ ದಿರಿಸು : ಸ್ವಾಮಿಗಳ ಆಕ್ಷೇಪ ಬಳಿಕ ಸಿಬ್ಬಂದಿ ಸಮವಸ್ತ್ರ ಬದಲು!

Manish tewari book on mumbai terror attack to Karnatak Rains top 10 News of November 23 ckm

ಇತ್ತೀಚೆಗೆ ಉದ್ಘಾಟನೆಗೊಂಡ ರಾಮಾಯಣ ಎಕ್ಸ್‌ಪ್ರೆಸ್‌ ರೈಲು (Ramayana Express train) ಸಿಬ್ಬಂದಿ ಕೇಸರಿ ಸಮವಸ್ತ್ರ (Orange dress) ಧರಿಸುವುದಕ್ಕೆ ಸ್ಥಳೀಯ ಸ್ವಾಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಸಮವಸ್ತ್ರ ಹಿಂಪಡೆಯದಿದ್ದರೆ ಡಿ.12 ರಂದು ರೈಲನ್ನು ದೆಹಲಿಯಲ್ಲಿ  ತಡೆಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 

Cyclone Alert | ಕರ್ನಾಟಕ ಸೇರಿ 4 ರಾಜ್ಯಕ್ಕೆ ಮತ್ತೆ ಮಹಾಮಳೆ : ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ

Manish tewari book on mumbai terror attack to Karnatak Rains top 10 News of November 23 ckm

ಹಲವು ದಿನಗಳಿಂದ ಭಾರೀ ಮಳೆಯಿಂದ (Heavy Rain) ತತ್ತರಿಸಿರುವ ರಾಜ್ಯದಲ್ಲಿ (karnataka) ಸದ್ಯ ಮಳೆ ಕಡಿಮೆಯಾಗುವ ಲಕ್ಷಣಗಳಿದ್ದರೂ, ಬಂಗಾಳ ಕೊಲ್ಲಿಯಲ್ಲಿ (Bea Of Bengal) ಮುಂದಿನ ನಾಲ್ಕೈದು ದಿನಗಳಲ್ಲಿ ಸೃಷ್ಟಿಯಾಗಲಿರುವ ಚಂಡ ಮಾರುತದ (Cyclone) ಪರಿಣಾಮ ಪುನಃ ರಾಜ್ಯಾದ್ಯಂತ ಮಳೆ ಆರ್ಭಟಿಸುವ ಸಂಭವವಿದೆ. 
 
Follow Us:
Download App:
  • android
  • ios