ಮುಂಬೈ : ಕಂಗನಾ ರಣೌತ್ ಅಭಿನಯದ  ಮಣಿಕರ್ಣಿಕಾ  ಕ್ವೀನ್ ಆಫ್ ಜಾನ್ಸಿ ಚಿತ್ರದ ಸಹ ನಿರ್ಮಾಪಕ ಕಮಲ್ ಜೈನ್ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. 

ಕಂಗನಾಗೆ ಅನೇಕ ರೀತಿಯಲ್ಲಿ ಬೆಂಬಲ ನೀಡಿದ್ದ ಈ ವ್ಯಕ್ತಿ ಇದೀಗ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಪಾರ್ಶ್ವವಾಯುವಿಗೆ ತುತ್ತಾಗಿ ಕಮಲ್ ಜೈನ್ ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿದೆ. 

ವರದಿ ಪ್ರಕಾರ ಕಮಲ್ ಅವರು ಅತೀ ಹೆಚ್ಚಿನ ಒತ್ತಡದಿಂದ ಬಳಲುತ್ತಿದ್ದರು. ಮಣಿಕರ್ಣಿಕಾ ಚಿತ್ರಕ್ಕೆ ಅತೀ ಹೆಚ್ಚಿನ ಬಂಡವಾಳ ಹೂಡಿದ್ದು, ಇದೇ ಒತ್ತಡ ಅವರನ್ನು ಅನಾರೋಗ್ಯಕ್ಕೆ ಈಡುಮಾಡಿದೆ ಎನ್ನಲಾಗಿದೆ.   

ಸುಮಾರು 100 ಕೋಟಿವರೆಗೂ ಕೂಡ ಈ ಚಿತ್ರ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದ್ದು,  ಅದ್ದೂರಿ ಸೆಟ್ಗಳನ್ನು ಬಳಕೆ ಮಾಡಲಾಗಿದೆ.  ಕಂಗನಾ ಅಭಿನಯದ ಈ ಚಿತ್ರ ಹೆಚ್ಚಿನ ಯಶಸ್ಸು ಕಾಣುವ ನಿರೀಕ್ಷೆಯಲ್ಲಿ ಚಿತ್ರ ತಂಡವಿದೆ.