ಮಂಗಳೂರು (ಏ. 23): ಜಮು ಕಾಶ್ಮೀರದಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ  ಮಂಗಳೂರು ಮತ್ಸ್ಯೋದ್ಯಮ ಸಂಪೂರ್ಣ ಬಂದ್ ಆಗಲಿದೆ. 

ಮಂಗಳೂರು ಮೀನಿನ ಬಂದರು, ಮಾರುಕಟ್ಟೆ ಸಂಪೂರ್ಣ ಬಂದ್ ಆಗಲಿದೆ.  ಮೀನು ಮಾರಾಟ ಮತ್ತು ಮೀನುಗಾರಿಕೆ ಸ್ಥಗಿತಗೊಳಿಸಿ ಮೀನುಗಾರರರು, ವರ್ತಕರು  ಬಂದ್’ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.  ನಿತ್ಯ ಜನಜಂಗುಳಿಯಿರುವ ಕೂಡಿರುವ ಬಂದರು ಖಾಲಿ ಖಾಲಿ ಹೊಡೆಯಲಿದೆ. 

ಜಮ್ಮು ಕಾಶ್ಮೀರದ ಕತ್ವಾ ಜಿಲ್ಲೆಯ  8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ‌  ಕೊಲೆ ಮಾಡಲಾಗಿದೆ. ಇದು ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಘಟನೆಯನ್ನು ಖಂಡಿಸಿ ಅನೇಕ ಕಡೆ ಪ್ರತಿಭಟನೆಗಳಾಗಿವೆ.