Asianet Suvarna News Asianet Suvarna News

ಮಂಡ್ಯದ ರಾಗಿ ಮುದ್ದೆ-ಕೋಳಿ ಸಾರು ಸ್ಪರ್ಧೆ ಹೇಗಿತ್ತು?

Jul 1, 2018, 7:01 PM IST

ಅಲ್ಲಿ ಒಂದು ಸಾವಿರ ರಾಗಿ ಮುದ್ದೆ ಹಾಗೂ ಅರ್ಧ ಕ್ವಿಂಟಾಲ್ ನಾಟಿಕೋಳಿ ಸಾರು ತಯಾರಾಗಿತ್ತು. ರಾಗಿ ಮುದ್ದೆ ಉಣ್ಣುವ ಸ್ಪರ್ಧೆಗೆ ಮಂಡ್ಯದ ಮಂಗಲ ಗ್ರಾಮದಲ್ಲಿ ಕಿಕ್ಕಿರಿದು ಜನ ಸೇರಿದ್ದರು.

ಮೊದಲೆ ಹೇಳಿದಂತೆ ಸ್ಪರ್ಧೆಯಲ್ಲಿ ಗೆದ್ದವರಿಗೆ ಆನೆಬಲ ಸಿನಿಮಾದಲ್ಲಿಯೂ ನಟಿಸುವ ಅವಕಾಶ ಖಾತ್ರಿಯಾಗಿತ್ತು.  ಸ್ಪರ್ಧೆಯಲ್ಲಿ 100 ರಿಂದ 150 ಜನ ಸ್ಪರ್ಧಾಳುಗಳು ಭಾಗವಹಿಸಿದ್ದರು.

ಹನಿಯಂಬಾಡಿ ಮತ್ತು ರಾಜು ಕೈರುಚಿಯಲ್ಲಿ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತಯಾರಾಗಿದ್ದವು. ಹಿನ್ನೆಲೆಯಲ್ಲಿ ಜಾನಪದ ಸಂಗೀತ ಕೇಳಿ ಬರುತ್ತಿತ್ತು. ರಾಗಿ ಮುದ್ದೆ ಸ್ಪರ್ಧೆಯ ಉತ್ಸಾಹದಲ್ಲಿ ನೀವು ಒಮ್ಮೆ ಭಾಗಿಯಾಗಿ ಬನ್ನಿ.