Asianet Suvarna News Asianet Suvarna News

ಲ್ಯಾಬ್ರಡಾರ್ ನಾಯಿಗೆ ಕ್ಷಮೆ ಕೇಳದ್ದಕ್ಕೆ ವ್ಯಕ್ತಿಯನ್ನು ಇರಿದು ಕೊಂದ ಪಾಪಿಗಳು!

ರಾಜಧಾನಿಯನ್ನು ಬೆಚ್ಚಿ ಬೀಳಿಸಿದ ಲ್ಯಾಬ್ರಡಾರ್ ನಾಯಿ! ನಾಯಿಗೆ ಕ್ಷಮೆ ಕೇಳಿಲ್ಲ ಅಂತಾ ವ್ಯಕ್ತಿಯನ್ನು ಇರಿದು ಕೊಂದರು! ಲ್ಯಾಬ್ರಡಾರ್ ನಾಯಿ ಟಾಮಿಗೆ ಡಿಕ್ಕಿ ಹೊಡೆದಿದ್ದ ಚಾಲಕ ವಿಜೇಂದರ್! ವಿಜೇಂದರ್‌ನನ್ನು ಇರಿದು ಕೊಂದ ನಾಯಿ ಮಾಲೀಕನ ಕುಟುಂಬ! ನವದೆಹಲಿಯ ಉತ್ತಮ ನಗರದ ಬಳಿ ನಡೆದ ಭೀಕರ ಘಟನೆ

Man stabbed to death after refuses to say sorry to dog
Author
Bengaluru, First Published Oct 7, 2018, 12:13 PM IST

ನವದೆಹಲಿ[ಅ.7): ಮಿನಿ ಟ್ರಕ್ ಚಾಲಕನೋರ್ವ ತನ್ನ ಪ್ರೀತಿಯ ಲ್ಯಾಬ್ರಡಾರ್ ನಾಯಿಗೆ ಡಿಕ್ಕಿ ಹೊಡೆದು, ಅದಕ್ಕೆ ಕ್ಷಮೆ ಕೇಳದ್ದಕ್ಕೆ ನಾಯಿ ಮಾಲೀಕ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

ನೈರುತ್ಯ ದೆಹಲಿಯ ಉತ್ತಮ ನಗರದ ಮೋಹನ್ ಗಾರ್ಡನ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಮಿನಿ ಟ್ರಕ್ ಚಾಲಕ ವಿಜೇಂದರ್ ಎಂಬಾತ ತನ್ನ ನಾಯಿಗೆ ಡಿಕ್ಕಿ ಹೊಡೆದಿದ್ದಲ್ಲದೇ ಅದಕ್ಕೆ ಕ್ಷಮೆ ಕೇಳಲಿಲ್ಲ ಎಂಬ ಕಾರಣಕ್ಕೆ ನಾಯಿ ಮಾಲೀಕ ಅಂಕಿತ್ ಎಂಬಾತ ತನ್ನ ಕುಟುಂಬ ಸದಸ್ಯರೊಡನೆ ಸೇರಿ ಆತನನ್ನು ಹತ್ಯೆಗೈದಿದ್ದಾರೆ.

ಅಂಕಿತ್ ತನ್ನ ಸಹೋದರರಾದ ಪರಾಸ್ ಮತ್ತು ದೇವ ಜೊತೆಗೂಡಿ ಮಧ್ಯರಾತ್ರಿ ತಮ್ಮ ಮುದ್ದಿನ ನಾಯಿ ಟಾಮಿ ಜೊತೆ ವಾಕಿಂಗ್ ಬಂದಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ವಿಜೇಂದರ್ ವಾಹನ ಟಾಮಿಗೆ ಸ್ವಲ್ಪ ಸವರಿಕೊಂಡು ಹೋಗಿದ್ದು ಭಯಗೊಂಡ ನಾಯಿ ಬೊಗಳುತ್ತಿದ್ದಂತೆ ಮೂವರೂ ವಿಜೇಂದರ್ ಜೊತೆ ಜಗಳಕ್ಕೆ ಇಳಿದಿದ್ದಾರೆ.

ಮಾತು ವಿಕೋಪಕ್ಕೆ ತಿರುಗಿ ಅಂಕಿತ್ ಮತ್ತು ಸಹೋದರರು ವಿಜೇಂದರ್ ಮತ್ತು ಆತನ ಸಹೋದರ ರಾಣಾ ಮೇಲೆ ಚಾಕು ಮತ್ತು ಸ್ಕ್ರೂ ಡೈವರ್ ನಿಂದ ಇರಿದಿದ್ದಾರೆ. ವಿಜೇಂದರ್ ಸ್ಥಳದಲ್ಲೇ ಸಾವೀಗಿಡಾದರೆ, ರಾಣಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾನೆ.

ಆರೋಪಿಗಳನ್ನು ಸಹೋದರರಾದ ಅಂಕಿತ್, ಪರಾಸ್ ಮತ್ತು ಅವರ ಮನೆ ಬಾಡಿಗೆದಾರ ದೇವ್ ಚೋಪ್ರಾ ಎಂದು ಗುರುತಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios