ಢಾಕಾ[ಅ.09]: ಮುಂಜಾನೆಯ ತಿಂಡಿಯಲ್ಲಿ ಕೂದಲು ಸಿಕ್ಕ ಕಾರಣಕ್ಕೆ ಬಾಂಗ್ಲಾದೇಶದ ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆಯನ್ನು ಬೋಳಿಸಿರುವ ಅಮಾನವೀಯ ಘಟನೆ ನಡೆದಿದೆ.

ಜಾಯ್‌ಪುರಹತ್‌ ಜಿಲ್ಲೆಯ ಬಾಬು ಮೊಂಡಲ್‌ ಎಂಬಾತ ಸೇವಿಸುತ್ತಿದ್ದ ತಿಂಡಿ ಹಾಗೂ ಹಾಲಿನಲ್ಲಿ ತಲೆಗೂದಲು ಪತ್ತೆಯಾಗಿತ್ತು. ಬಳಿಕ ಆತನಿಗೆ ಪತ್ನಿ ಬೇರೆ ಆಹಾರ ನೀಡಿದ್ದಳು. ಇದರಿಂದ ಕೋಪಗೊಂಡ ಆತ, ಬ್ಲೇಡ್‌ನಿಂದ ತನ್ನ ಪತ್ನಿಯ ತಲೆಯನ್ನು ಬೋಳಿಸಿದ್ದಾನೆ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ಮೊಂಡನ್‌ನನ್ನು ಬಂಧಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿದ್ದು, ಜನವರಿ ಬಳಿಕ 630 ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗಿದೆ ಮತ್ತು ದೌರ್ಜನ್ಯದಿಂದ 37 ಮಂದಿ ಮಹಿಳೆಯರು ಸಾವಿಗೀಡಾಗಿದ್ದಾರೆ ಎಂದು ಸಮಾಜಸೇವಾ ಸಂಘಟನೆಯೊಂದು ಆರೋಪಿಸಿದೆ.