Asianet Suvarna News Asianet Suvarna News

7 ವರ್ಷ ಅತ್ಯಾಚಾರ, 7 ಬಾರಿ ಗರ್ಭಪಾತ: ಥೂ ನೀಚ!

ಬಾಲಕಿ ಮೇಲೆ 7 ವರ್ಷ ನಿರಂತರ ಅತ್ಯಾಚಾರ! 7 ಬಾರಿ ಗರ್ಭಪಾತ ಮಾಡಿಸಿದ ಪಾಪಿ ಯುವಕ! ಪೋಷಕರ ಸಹಾಯದಿಂದ ಠಾಣೆಯಲ್ಲಿ ದೂರು ದಾಖಲಿಸಿದ ಯುವತಿ! 7 ವರ್ಷ ಅತ್ಯಾಚಾರ ನಡೆಸಿದ ಇದೀಗ ಪೊಲೀಸರ ಅತಿಥಿ          
 

Man raped girl for 7 years: forced her for abortion everytime
Author
West Bengal, First Published Aug 23, 2018, 6:22 PM IST

ಮುನೇಂದ್ರಗಡ್(ಆ.23): 13 ವರ್ಷದ ಬಾಲಕಿ ಮೇಲೆ 7 ವರ್ಷ ನಿರಂತರ ಅತ್ಯಾಚಾರ ನಡೆಸಿ, ಬಲಾತ್ಕಾರವಾಗಿ 7 ಬಾರಿ ಗರ್ಭಪಾತ ಮಾಡಿಸಿದ ಹೃದಯ ವಿದ್ರವಾಕ ಘಟನೆ ಛತ್ತೀಸ್ ಗಡ್ ನಲ್ಲಿ ನಡೆದಿದೆ.

ಇಲ್ಲಿನ ಮುನೇಂದ್ರಗಡ್ ನ 21 ವರ್ಷದ ಯುವತಿ ತನ್ನ ಮೇಲೆ ಸತತ 7 ವರ್ಷ ಅತ್ಯಾಚಾರ ನಡೆಸಿದ ಪಾಪಿ ವಿರುದ್ಧ ದೂರು ದಾಖಲಿಸಿದ್ದಾಳೆ. ಈಕೆ 13 ವರ್ಷದ ಬಾಲಕಿಯಾಗಿದ್ದಾಗಲೇ ಈಕೆಯ ಮೇಲೆ ಸತತ 7 ವರ್ಷಗಳ ಕಾಲ ಅತ್ಯಾಚಾರ ನಡೆಸಿದ್ದ ಯುವಕ, ಈ ಕುರಿತು ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಅಲ್ಲದೇ ಈ ವೇಳೆ ಯುವತಿ ಒಟ್ಟು 7 ಬಾರಿ ಗರ್ಭವತಿಯಾಗಿದ್ದು, ಪ್ರತಿ ಬಾರಿಯೂ ಆಕೆಯನ್ನು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎನ್ನಲಾಗಿದೆ. ಇಷ್ಟಕ್ಕೂ ಸುಮ್ಮನಾಗದ ಪಾಪಿ ಯುವಕ, ಮತ್ತೆ ಲೈಂಗಿಕ ಕ್ರಿಯೆಗೆ ಆಕೆಗೆ ಒತ್ತಾಯ ಮಾಡಿದಾಗ ಬೇಸತ್ತ ಯುವತಿ ಈ ಕುರಿತು ಪೋಷಕರಿಗೆ ತಿಳಿಸಿ ಅವರ ಸಹಾಯದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಸದ್ಯ ಯುವತಿ ನೀಡಿದ ದೂರಿನ ಆಧಾರದ ಮೇಲೆ ಯುವಕನನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios