ಹೈದರಾಬಾದ್‌[ಏ.15]: ವಿವಾಹವಾಗುವಂತೆ ಒತ್ತಾಯಿಸಿದ್ದ ಪ್ರಿಯತಮೆಯನ್ನು, ಪ್ರಿಯಕರನೇ ಹತ್ಯೆಗೈದು, ಸೂಟ್‌ಕೇಸ್‌ನಲ್ಲಿ ತುಂಬಿ, ಮೋರಿಗೆ ಎಸೆದು ಹೋದ ಭೀಕರ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಸ್ಥಳೀಯ ಟೆಕ್ಕಿಯೊಬ್ಬಳು, ಬಿಹಾರ ಮೂಲದ ಟೆಕ್ಕಿ ಸುನಿಲ್‌ನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಕಾಲೇಜು ದಿನಗಳಿಂದಲೇ ಸ್ನೇಹಿತರಾಗಿದ್ದರು. ಈ ನಡುವೆ ಯುವತಿ, ಇತ್ತೀಚೆಗೆ ಮದುವೆಯಾಗೋಣ ಎಂದು ಸುನಿಲ್‌ಗೆ ಒತ್ತಡ ಹಾಕಿದ್ದರು. ಆದರೆ ಅದಕ್ಕೆ ಆತ ನಿರಾಕರಿಸಿದ್ದ.

ಈ ನಡುವೆ ಇತ್ತೀಚೆಗೆ ದುಬೈಗೆ ಕೆಲಸಕ್ಕಾಗಿ ಹೋಗಲು, ಯುವತಿಗೆ ವೀಸಾ ಮಾಡಿಸುವುದಾಗಿ ಹೇಳಿ ಆಕೆಯನ್ನು ಸುನಿಲ್‌ ಕರೆದೊಯ್ದಿದ್ದ. ಬಳಿಕ ಇಬ್ಬರು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಆಕೆಯನ್ನು ಹತ್ಯೆ ಮಾಡಿದ್ದ ಸುನಿಲ್‌, ಆಕೆಯ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಮೋರಿಗೆ ಎಸೆದು ಹೋಗಿದ್ದ. ಈ ನಡುವೆ ಪುತ್ರಿ ಮನೆಗೆ ಮರಳದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ದೂರು ನೀಡಿದ್ದರು. ಇದೇ ವೇಳೆ ಶನಿವಾರ ಯುವತಿಯ ಶವ ಪತ್ತೆಯಾಗಿದೆ. ವಿಚಾರಣೆ ವೇಳೆ ತಾನೇ ಹತ್ಯೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.