ಪಾಟ್ನಾ(ಸೆ.4): ದೇವಸ್ಥಾನದ ಆವರಣದಲ್ಲಿ ಮಹಿಳೆಯೊಂದಿಗೆ ಅಸಭ್ಯ ಭಂಗಿಯಲ್ಲಿ ಸೆರೆ ಸಿಕ್ಕ ವ್ಯಕ್ತಿ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. 

ದೇವಸ್ಥಾನದ ಆವರಣದಲ್ಲೇ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವ್ಯಕ್ತಿ ರಾಜಸ್ಥಾನದ ಪ್ರಮುಖ ಬಿಜೆಪಿ ನಾಯಕ ಎಂದು viralindia.net ಮತ್ತು newsfyi.in ನಲ್ಲಿ ಹೇಳಲಾಗಿತ್ತು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿತ್ತು.

ಮಾತೆತ್ತಿದರೆ ಹಿಂದೂ, ಹಿಂದುತ್ಬ ಎನ್ನುವ ಬಿಜೆಪಿ ಪಕ್ಷದಲ್ಲಿ ಇಂತಹ ಅಸಭ್ಯ ವ್ಯಕ್ತಿಗಳೇ ಇರುವುದು ಎಂಬೆಲ್ಲಾ ಮಾತುಕಗಳು ಕೇಳಿ ಬರುತ್ತಿದ್ದವು. ಕೆಲವರು ಫೋಟೋದಲ್ಲಿರುವ ವ್ಯಕ್ತಿ ಬಿಜೆಪಿ ಯುವ ಮೋರ್ಚಾ ನಾಯಕನೆಂದೂ, ಮಹಿಳೆ ಎಬಿವಿಪಿ ಕಾರ್ಯಕರ್ತೆ ಎಂದೂ ಆರೋಪಿಸಿದ್ದರು.

ಆದರೆ ಈ ಫೋಟೋದ ಅಸಲಿಯತ್ತು ಇದೀಗ ಬಯಲಾಗಿದ್ದು, ಈ ಫೋಟೋ ಎರಡು ವರ್ಷಗಳ ಹಿಂದೆ ಬಿಹಾರದ ದೇವಸ್ಥಾನವೊಂದರಲ್ಲಿ ಕ್ಲಿಕ್ಕಿಸಲಾಗಿದ್ದು, ಫೋಟೋದಲ್ಲಿರುವ ವ್ಯಕ್ತಿ ಬಿಜೆಪಿ ಪಕ್ಷದ ನಾಯಕನಲ್ಲ ಎಂಬುದು ಸಾಬೀತಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ವಿರೋಧಿಗಳು ಇಂತಹ ಕೀಳು ಮಟ್ಟದ ಆರೋಪ ಮಾಡುತ್ತಿರುವುದು ಸಾಬೀತಾಗಿದೆ.