ಮದುವೆಯ ಸುವರ್ಣ ವಾರ್ಷಿಕೋತ್ಸವ ಆಚರಿಸಿಕೊಂಡ ಖರ್ಗೆ ದಂಪತಿ

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ತಮ್ಮ ವೈವಾಹಿಕ ಜೀವನದ 50ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಕಲಬುರಗಿಯ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಪರಸ್ಪರ ಹೂಮಾಲೆ  ಬದಲಿಸಿಕೊಂಡ ಖರ್ಗೆ-ರಾಧಾಬಾಯಿ ದಂಪತಿ ಸರಳವಾಗಿ ಸುವರ್ಣ ವಾರ್ಷಿಕೋತ್ಸವನ್ನು ಆಚರಿಸಿದ್ದಾರೆ. ಖರ್ಗೆ ದಂಪತಿಯ ಸಂಭ್ರಮದಲ್ಲಿ ಮಕ್ಕಳು, ಮೊಮ್ಮಕ್ಕಳು, ಆಪ್ತರು ಭಾಗಿಯಾಗಿದ್ದರು.

Comments 0
Add Comment