ಇಂದು ತೆಲುಗು ನಟ ಮಹೇಶ್ ಬಾಬು ಕನ್ನಡಿಗರ ಕೋಪಕ್ಕೆ ತುತ್ತಾಗಿ ತಮ್ಮ ತಪ್ಪನ್ನು ತಿದ್ದುಕೊಂಡಿದ್ದಾರೆ. ನಿನ್ನೆ ಮಹೇಶ್ ಬಾಬು ಅಭಿನಯದ 'ಭರತ್ ಅನೆ ನೇನು' ಚಿತ್ರ ಬಿಡುಗಡೆಯಾಗಿ ವಿಶ್ವದಾದ್ಯಂತ ಪ್ರಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಲು ಸ್ವತಃ ನಟ ಮಹೇಶ್ ಬಾಬು ತಮ್ಮ ಫೇಸ್'ಬುಕ್ ಪೇಜ್'ನಲ್ಲಿ ಧನ್ಯವಾದ ಸಲ್ಲಿಸಿದ್ದರು. ತಮ್ಮ ಅಭಿನಂದನೆ ಸಂದೇಶದಲ್ಲಿ ಕೃತಜ್ಞತೆಯ ತೆಲುಗು,ತಮಿಳು,ಹಿಂದಿ ಹಾಗೂ ಇಂಗ್ಲಿಷ್ ಪದಗಳನ್ನು ಸೇರಿಸಿ ಕನ್ನಡವನ್ನು ಮರೆತಿದ್ದರು. ಇದನ್ನು ನೋಡಿ ಕೆರಳಿದ ಕನ್ನಡಿಗರು ಮಹೇಶ್ ಬಾಬುಗೆ ಹಿಗ್ಗಾಮಗ್ಗಾ ತರಾಟರಗೆ ತೆಗೆದುಕೊಂಡರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಕೂಡ ಆಯಿತು.

ತನ್ನ ತಪ್ಪನ್ನು ಅರಿತ ಮಹೇಶ್ ಬಾಬು ಕನ್ನಡ ಪದ ಕೃತಜ್ಞತೆಯನ್ನು ಪದವನ್ನು ಸೇರಿಸಿದರು. ಆದರೆ ಟ್ವಿಟರ್'ನಲ್ಲಿ ಮರೆತ್ತಿದ್ದು, ಅಲ್ಲಿ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿದೆ.