ದೇಶದೆಡೆ ಬಲಿದಾನದ ನೆನಪು, ನಮ್ಮ ರಾಜ್ಯದಲ್ಲಿಯೇ ಗಾಂಧಿ ತಾತ ಅನಾಥ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 15, Aug 2018, 9:31 PM IST
Mahatma Gandhi statue in Pathetic condition at Mysuru
Highlights

ದೇಶದೆಲ್ಲೆಡೆ ಸ್ವಾತಂತ್ರ್ಯ ಸಂಭ್ರಮ ಮನೆ ಮಾಡಿ ರಾಷ್ಟ್ರಕ್ಕೆ ಪ್ರಾಣ ತ್ಯಾಗ ಮಾಡಿದವರ ನೆನಪು ಮಾಡಿಕೊಳ್ಳುತ್ತಿದ್ದರೆ ಇಲ್ಲಿ ಮಾತ್ರ ಗಾಂಧಿ ತಾತ ಅನಾಥ! ಇದು ಬೇರೆ ಎಲ್ಲಿಯದೋ ಸುದ್ದಿ ಅಲ್ಲ.  ನಮ್ಮದೇ  ರಾಜ್ಯದ ಸಾಂಸ್ಕೃತಿಕ ನಗರಿಯ ಸುದ್ದಿ.

ಮೈಸೂರು[ಆ.15]  ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅಪಮಾನ ಆಗಿದೆ ಮತ್ತು ಆಗುತ್ತಿದೆ. 

ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯಲ್ಲಿರುವ ಗಾಂಧಿ ಅಧ್ಯಯನ ಕೇಂದ್ರದಲ್ಲಿಯೇ ಮಹಾತ್ಮ ಗಾಂಧೀಜಿ ಪುತ್ಥಳಿಯಲ್ಲಿ  ಅನಾಥವಾಗಿದೆ. ಕನ್ನಡಕ ಬಿದ್ದು ಹೋಗಿ ಯಾವುದೋ ಕಾಲವಾಗಿದ್ದು ಪುತ್ಥಳಿಯ ಬಣ್ಣವೆಲ್ಲ ಮಾಸಿಹೋಗಿದೆ.

ಮೈಸೂರು ವಿವಿಯಲ್ಲಿ ಗಾಂಧಿ ಅಧ್ಯಯನ ಕೇಂದ್ರ ತೆರೆದು ಗಾಂಧೀಜಿ ಸಂದೇಶ ಹಾಗೂ ಮೌಲ್ಯಗಳ ಸಾರಲಾಗುತ್ತಿದೆ. ಅಧ್ಯಯನ ಕೇಂದ್ರದಲ್ಲಿರುವ ಗಾಂಧೀಜಿ ಸ್ಥಿತಿಯನ್ನು ನೋಡಿದರೆ ಮಾತ್ರ ಯಾವ ತತ್ವ ಸಾರಲಾಗುತ್ತಿದೆ ಎಂಬ ಅನುಮಾನ  ಉಂಟಾಗುತ್ತದೆ.

loader