ಸಾಂಗ್ಲಿ(ಡಿ.06): ವ್ಯೆಶ್ಯಾವಾಟಿಕೆ ಧಂಧೆಕೋರರನ್ನು ಮಟ್ಟ ಹಾಕಲು ಮಹಾರಾಷ್ಟ್ರ ಪೊಲೀಸ್ ಇಲಾಖೆ ಹೊಸ ತಂತ್ರವೊಂದನ್ನು ಅಳವಡಿಸಿಕೊಂಡಿದೆ. ಹೈ ಪ್ರೋಫೈಲ್ ವ್ಯೆಶ್ಯಾವಾಟಿಕೆಗೆ ಕಡಿವಾಣ ಹಾಕಲು ಪೊಲೀಸರ ಈ ತಂತ್ರ ನಿಜಕ್ಕೂ ಫಲ ನೀಡುತ್ತಿದೆ.

ಹೌದು, ವ್ಯೆಶ್ಯಾವಾಟಿಕೆಗೆ ಫುಲ್ ಸ್ಟಾಪ್ ಹಾಕಲು ನಿರ್ಧರಿಸುವ ಮಹಾರಾಷ್ಟ್ರ ಪೊಲೀಸ್ ಇಲಾಖೆ, ಇದಕ್ಕಾಗಿ ವ್ಯೆಶ್ಯಾವಾಟಿಕೆ ಅಡ್ಡೆಗಳ ಕುರಿತು ಮಾಹಿತಿ ಸಂಗ್ರಹಿಸಲು ತಮ್ಮದೇ ಅಧಿಕಾರಿಯೋರ್ವನನ್ನು ಗ್ರಾಹಕನನ್ನಾಗಿ ಧಂಧೆಕೋರರ ಬಳಿ ಕಳುಹಿಸುತ್ತಿದೆ.

ಗ್ರಾಹಕನಾಗಿ ವ್ಯೆಶ್ಯಾವಾಟಿಕೆ ಅಡ್ಡೆಗೆ ಹೋಗುವ ಅಧಿಕಾರಿ ಅಲ್ಲಿನ ಮಾಹಿತಿ ಸಂಗ್ರಹಿಸಿ ನಂತರ ದಾಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಾನೆ. ಕೂಡಲೇ ವ್ಯೆಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸುವ ಪೊಲೀಸರು, ಧಂಧೆಕೋರರನ್ನು ಬಂಧಿಸುತ್ತಾರೆ.

ಇತ್ತೀಚಿಗೆ ಸಾಂಗ್ಲಿಯಲ್ಲಿ ಪೊಲೀಸರು ಇಂತದ್ದೇ ದಾಳಿ ನಡೆಸಿದ್ದು, ಅಪಾರ್ಟ್ ಮೆಂಟ್ ವೊಂದರಲ್ಲಿ ಹೈಪ್ರೊಫೈಲ್ ವ್ಯೆಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯನ್ನು ಬಂಧಿಸಿದ್ದಲ್ಲದೇ ಗೃಹ ಬಂಧನದಲ್ಲಿದ್ದ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.

ಇದಕ್ಕೂ ಮೊದಲು ಗ್ರಾಹಕನಾಗಿ ಈ ಮನೆಗೆ ಭೇಟಿ ಕೊಟ್ಟ ಅಧಿಕಾರಿ, ಅಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.