ಹಸುವಿನ ಮೇಲೆ ರೇಪ್

First Published 6, Aug 2018, 9:40 AM IST
Madhya Pradesh man arrested for raping cow
Highlights

ಹರ್ಯಾಣದಲ್ಲಿ ಮೇಕೆ ಮೇಲೆ ಅತ್ಯಾಚಾರ ನಡೆದ ಪ್ರಕರಣ ಮಾಸಡುವ ಮುನ್ನವೇ ಇದೀಗ ಮಧ್ಯ ಪ್ರದೇಶದಲ್ಲಿ ಹಸುವಿನ ಮೇಲೆ ಅತ್ಯಾಚಾರ ನಡೆದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. 

ರಾಜಗಢ(ಮಧ್ಯಪ್ರದೇಶ): ಇತ್ತೀಚೆಗಷ್ಟೇ ಹರ್ಯಾಣದಲ್ಲಿ 8 ವ್ಯಕ್ತಿಗಳು ಮೇಕೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆನ್ನಲ್ಲೇ, ಮಧ್ಯಪ್ರದೇಶದಲ್ಲಿ ಕಾಮುಕನೋರ್ವ ದನದ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. 

ಇಲ್ಲಿನ ರಾಜಗಢ ಜಿಲ್ಲೆಯ ಸುಥಾಲಿ ಯಾ ಎಂಬಲ್ಲಿ ಸ್ಥಳೀಯ ಉದ್ಯಮಿಯೊಬ್ಬರು ಶುಕ್ರ ವಾರ ಮನೆಗೆ ಮರಳುತ್ತಿದ್ದಾಗ, ಛೋಟೆ ಖಾನ್ ಎಂಬ ಆರೋಪಿ, ಗೋವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದನ್ನು ಕಂಡಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಕೇಸ್ ಜಡಿದಿರುವ ಪೊಲೀಸರು, ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

(ಸಾಂದರ್ಬಿಕ ಚಿತ್ರ)

 

loader