ಅಪ್ಪ ಮಕ್ಕಳ ಟಿಕೆಟ್ ಲಿಸ್ಟ್ ನೋಡಿ ಮಿಸ್ತ್ರಿ ಶಾಕ್! ಕಾಂಗ್ರೆಸ್ ನಾಯಕರಿಗೆ ಖಡಕ್ ಸೂಚನೆ

First Published 13, Apr 2018, 12:39 PM IST
Madhusudhan Mistry Warning to Congress Leader
Highlights

ಎಲ್ಲರೂ  ಎರಡೆರಡು‌ ಕ್ಷೇತ್ರ ಕೇಳುವುದರಲ್ಲಿ ಅರ್ಥವಿಲ್ಲ. ಅಪ್ಪ ಮಕ್ಕಳ ಟಿಕೆಟ್ ಲಿಸ್ಟ್ ನೋಡಿ ಮಿಸ್ತ್ರಿ ಶಾಕ್   ಆಗಿದ್ದಾರೆ. 

ಬೆಂಗಳೂರು (ಏ. 13): ಎಲ್ಲರೂ  ಎರಡೆರಡು‌ ಕ್ಷೇತ್ರ ಕೇಳುವುದರಲ್ಲಿ ಅರ್ಥವಿಲ್ಲ. ಅಪ್ಪ ಮಕ್ಕಳ ಟಿಕೆಟ್ ಲಿಸ್ಟ್ ನೋಡಿ ಮಿಸ್ತ್ರಿ ಶಾಕ್   ಆಗಿದ್ದಾರೆ. 

ಒಂದೇ  ಕುಟುಂಬಕ್ಕೆ  ಎರಡು ಟಿಕೆಟ್ ಒಳ್ಳೆಯ ಬೆಳವಣಿಗೆಯಲ್ಲ  ಎಂದು  ರಾಜ್ಯ ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮಿಸ್ತ್ರಿ ಖಡಕ್ ಸೂಚನೆ ನೀಡಿದ್ದಾರೆ. ಸಿಎಂ ಎರಡು ಕ್ಷೇತ್ರಗಳಲ್ಲೂ ಸ್ಪರ್ಧೆಗೆ ಮುಂದಾಗಿದ್ದಾರೆ.  ಸಿಎಂ ಕೇಳುತ್ತಿದ್ದಾರೆ ಅಂತಾ ಇತರರು ಕೇಳುವುದರಲ್ಲಿ ಅರ್ಥವಿಲ್ಲ.  ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಕೂಡಾ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಸಿಎಂ, ಕೆಪಿಸಿಸಿ ಅಧ್ಯಕ್ಷರು ಇಬ್ಬರೂ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ರೆ ತಪ್ಪು ಸಂದೇಶ ರವಾನೆಯಾಗಲಿದೆ. ಕಾಂಗ್ರೆಸ್ ಗೆ ಸೋಲಿನ ಭೀತಿ ಇದೆ ಅಂತಾ ಪ್ರತಿಪಕ್ಷಗಳಿಗೂ ಅಹಾರವಾಗ್ತೀರಾ? ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಯನ್ನ ಒಪ್ಪಿಕೊಳ್ಳಬಹುದು.  ಬಾದಾಮಿಯಲ್ಲಿ ಸಿಎಂ ಅಭ್ಯರ್ಥಿಯೇ ಸ್ಪರ್ಧಿಸುತ್ತಿದ್ದಾರೆ ಎಂದಾಗ ಅಕ್ಕ ಪಕ್ಕದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಸಹಕಾರಿ ಆಗಲಿದೆ ಎಂದು ಸಮರ್ಥಿಸಿಕೊಳ್ಳಬಹುದು. ಹಾಗಂತ ಬೇರೆಯವರು ಎರಡು ಕ್ಷೇತ್ರ ಕೇಳೊದು ಸರಿಯಲ್ಲ.  ಟಿಕೆಟ್ ಕೇಳುತ್ತಿರುವ ಅಪ್ಪ ಮಕ್ಕಳು, ಹಾಗೂ  ಪರಮೇಶ್ವರ್ ಗೆ ಮಿಸ್ತ್ರಿ ಖಡಕ್ ಸೂಚನೆ ನೀಡಿದ್ದಾರೆ.  

loader