Asianet Suvarna News Asianet Suvarna News

#ಮೀ ಟೂ: ಮಾಧುರಿ ಮುಧೋಳ್ ಸುವರ್ಣನ್ಯೂಸ್‌ಗೆ ಹೇಳಿದ್ದಿಷ್ಟು?

ಕೇಂದ್ರ ಸಚಿವ ಸದಾನಂದ ಗೌಡ ಅವರನ್ನು ಸುತ್ತಿಕೊಂಡ #ಮೀ ಟೂ! ಬಿಜೆಪಿ ಸಂಸದ ಸದಾನಂದ ಗೌಡ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ! ಬಾಗಲಕೋಟೆ ಮೂಲದ ಮಹಿಳೆ ಮಾಧುರಿ ಮುಧೋಳ್ ಅವರಿಂದ ಗಂಭೀರ ಆರೋಪ 

ಬೆಂಗಳೂರು(ಅ. 17): ಇಡೀ ರಾಜ್ಯವೇ ಬೆಚ್ಚಿ ಬೀಳುವಂತ #ಮೀ ಟೂ ಆರೋಪ ಕೇಳಿ ಬಂದಿದ್ದು, ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಸದಾನಂದಗೌಡ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಬಾಗಲಕೋಟೆ ಮೂಲದ ಮಾಧುರಿ ಮುಧೋಳ್ ಎಂಬ ಮಹಿಳೆ ಸದಾನಂದ ಗೌಡ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಈ ಕುರಿತು ಚರ್ಚೆ ನಡೆಯುತ್ತಿರುವ ಕುರಿತು ಸ್ಪಷ್ಟನೆ ನೀಡಿರುವ ಮಾಧುರಿ ಮುಧೋಳ್, ತಾವು ಯಾವ ಮಾಧ್ಯಮದ ಜೊತೆಯೂ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ತಾವು ಈ ಕುರಿತು ಏನು ಹೇಳಬೇಕೊ ಅದನ್ನು ಫೇಸ್‌ಬುಕ್‌ನಲ್ಲಿ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..