ಬೆಂಗಳೂರು: ಪ್ರೀತಿಗೆ ವಿಚಾರವಾಗಿ ಕುಡಿದ ಮತ್ತಿನಲ್ಲಿ ಗಲಾಟೆ ತೆಗೆದು ಸಹೋದರರಿಬ್ಬರು ಗೆಳೆಯನೊಬ್ಬನನ್ನು ಉಸಿರುಗಟ್ಟಿಸಿ ಕೊಂದಿರುವ ಘಟನೆ ಕನ್ನಮಂಗಲದಲ್ಲಿ ನಡೆದಿದೆ. ಮುಳಬಾಗಿಲು ತಾಲೂಕಿನ ತಾಯಲೂರಿನ ಗ್ರಾಮದ ರಾಮಮೂರ್ತಿ (28) ಕೊಲೆಯಾದ ದುರ್ದೈವಿ. ಈ ಘಟನೆ ಸಂಬಂಧ ಮೃತನ ಸ್ನೇಹಿತ ರಾದ ದೇವರಾಜ್ ಮತ್ತು ಆತನ ಹಿರಿಯ ಸೋದರ ಸುನೀಲ್‌ನನ್ನು ಕಾಡುಗೋಡಿ ಠಾಣೆ ಪೊಲೀಸರು
ವಶಕ್ಕೆ ಪಡೆದಿದ್ದಾರೆ.

ಕೆಲಸ ಕೊಡಿಸುವುದಾಗಿ ಕರೆಸಿದ್ದರು: ಮುಳಬಾಗಿಲು ತಾಲೂಕಿನಲ್ಲಿ ರಾಮಮೂರ್ತಿ ಹಾಗೂ ಆರೋಪಿಗಳಾದ ದೇವರಾಜ್ ಮತ್ತು ಸುನೀಲ್ ಅಕ್ಕಪಕ್ಕ ಗ್ರಾಮದವರಾಗಿದ್ದು, ಬಾಲ್ಯ ಸ್ನೇಹಿತರು. ಹಲವು ದಿನಗಳಿಂದ ನಗರದಲ್ಲಿ ದೇವರಾಜ್ ಎಲೆಕ್ಟ್ರಿಶಿಯನ್ ಆಗಿದ್ದರೆ, ಪೆಟ್ರೋಲ್ ಬಂಕ್‌ನಲ್ಲಿ ಸುನೀಲ್ ಕೆಲಸ ಮಾಡುತ್ತಿದ್ದ. ಕನ್ನಮಂಗಲದಲ್ಲಿ ಬಾಡಿಗೆ ಕೊಠಡಿ ಯಲ್ಲಿ ದೇವರಾಜ್ ನೆಲೆಸಿದ್ದ. ಉದ್ಯೋಗವಿಲ್ಲದೆ ಊರಿನಲ್ಲಿದ್ದ ರಾಮಮೂರ್ತಿಗೆ ಈ ಸೋದರರು, ಫೆ.11 ರಂದು ಕೆಲಸ ಕೊಡಿಸುವುದಾಗಿ ಹೇಳಿ ನಗರಕ್ಕೆ ಕರೆಸಿಕೊಂಡಿದ್ದರು.

ಮರು ದಿನ ರಾತ್ರಿ ದೇವರಾಜ್ ಕೊಠಡಿಯಲ್ಲಿ ಮದ್ಯ ಸೇವಿಸುವಾಗ ಹಳೆ ಪ್ರೇಮ ಪುರಾಣವು ಸ್ನೇಹಿತರ ಮಧ್ಯೆ ಚರ್ಚೆಗೆ ಬಂದಿದೆ. ಈ ಹಿಂದೆ  ರಾಮಮೂರ್ತಿಯ ಪರಿಚಿತ ಯುವತಿ ಮೇಲೆ ದೇವರಾಜ್‌ಗೆ ಪ್ರೇಮವಾಗಿತ್ತು. ಆದರೆ ಇದಕ್ಕೆ ಯುವತಿ ಒಪ್ಪರಲಿಲ್ಲ. ಸೋಮವಾರ ರಾತ್ರಿ ಮದ್ಯ ಸೇವನೆ ವೇಳೆ ಹುಡುಗಿ ವಿಷಯವಾಗಿ ಸ್ನೇಹಿತರ ಮಧ್ಯೆ ಬಿರುಸಿನ ಮಾತಿನ ಚಕಮಕಿ ನಡೆ ದಿದೆ.

ಕೆರಳಿದ ಸೋದರರು, ಟವಲ್‌ನಿಂದ ಕುತ್ತಿಗೆ ಬಿಗಿದು ರಾಮಮೂರ್ತಿ ಕೊಲೆಗೆ ಯತ್ನಿಸಿದ್ದಾರೆ. ಉಸಿರಾಟದ ತೊಂದರೆಯಾಗಿ ರಾಮಮೂರ್ತಿ ಪ್ರಜ್ಞಾಹೀನನಾಗಿದ್ದಾನೆ. ತನ್ನ ಮನೆ ಮಾಲಿಕರ ನೆರವಿನಿಂದ ರಾಮಮೂರ್ತಿಯನ್ನು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.