ಸದಾನಂದಗೌಡ್ರ ಆರೋಗ್ಯದಲ್ಲಿ ಏರುಪೇರು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್..!...

ದಿಢೀರ್ ಅಸ್ವಸ್ಥಗೊಂಡು ಚಿತ್ರದುರ್ಗದ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ.

ಮೋದಿಯದ್ದು ಬ್ರಿಟೀಷ್ ಆಳ್ವಿಕೆ, ರೈತ ಪ್ರತಿಭಟನೆ ಚಂಪಾರನ್ ಸತ್ಯಾಗ್ರಹ ಎಂದ ರಾಹುಲ್ ಗಾಂಧಿ!...

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈತ ಪ್ರತಿಭಟನೆಯನ್ನು ನಿರ್ಲಕ್ಷ್ಯಿಸಿರುವ ಮೋದಿ ಸರ್ಕಾರ ಅವರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಇನ್ನು ರೈತರ ಪ್ರತಿಭಟನೆಯನ್ನು ಬ್ರಿಟೀಷರ ಆಳ್ವಿಕೆಯಲ್ಲಿ ನಡೆದ ಚಂಪಾರನ್ ಸತ್ಯಾಗ್ರಹಕ್ಕೆ ಹೋಲಿಸಿದ್ದರೆ, ಮೋದಿಯನ್ನು ಬ್ರಿಟೀಷ್ ಕಂಪನಿಗೆ ಹೋಲಿಸಿದ್ದಾರೆ. 

ಅಖಿಲೇಶ್ ಬೆನ್ನಲ್ಲೇ ಲಸಿಕೆಯನ್ನು 'ಫ್ರಾಡ್' ಎಂದ ಮತ್ತೊಬ್ಬ ನಾಯಕ!...

ಭಾರತದಲ್ಲಿ ಸೀರಂ ಇನ್ಸ್ಟಿಟ್ಯೂಟ್ ಹಾಗೂ ಭಾರತ್ ಬಯೋಟೆಕ್ ಲಸಿಕೆಯನ್ನು ತುರ್ತು ಬಳಕೆಗೆ ಅನುಮತಿ ನೀಡಿದೆ. ಹೀಗಿರುವಾಗ ಅತ್ತ ವಿರೋಧ ಪಕ್ಷದ ಕೆಲ ನಾಯಕರು ಇದರ ವಿಶ್ವಾಸಾರ್ಹತೆ ಬಗ್ಗೆಯೇ ಸವಾಲೆಸೆದಿದ್ದಾರೆ. ಸಮಾಜವಾದಿ ಪಕ್ಷ ಅಖಿಲೇಶ್ ಯಾದವ್ ಬೆನ್ನಲ್ಲೇ ಈಗ ಮತ್ತೊಬ್ಬ ಕಾಂಗ್ರೆಸ್ ನಾಯಕ ಈ ಲಸಿಕೆಯನ್ನು 'ಫ್ರಾಡ್' ಎಂದು ಕರೆದಿದ್ದಾರೆ. ಹೀಗಿರುವಾಗ ಸೋಶಿಯಲ್ ಮೀಡಿಯಾ ಬಳಕೆದಾರರು ಅವರ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಿಯಮ ಪಾಲಿಸಲು ಆಗಲ್ಲ ಅಂದ್ರೆ ಇಲ್ಲಿಗೆ ಬರಬೇಡಿ; ಟೀಂ ಇಂಡಿಯಾ ಆಟಗಾರರಿಗೆ ಖಡಕ್ ವಾರ್ನಿಂಗ್...

ಕೊರೋನಾ ಕ್ವಾರಂಟೈನ್‌ ನಿಯಮಗಳನ್ನು ಸಡಿಲ ಮಾಡಿ ಎಂದ ಟೀಂ ಇಂಡಿಯಾ ಮನವಿಯನ್ನು ಆಸ್ಟ್ರೇಲಿಯಾ ಸಾರಾಸಗಟಾಗಿ ತಳ್ಳಿ ಹಾಕಿದೆ. 

ಕತ್ರಿನಾ ಅಲ್ಲ ಕಣ್ರೀ, ಕಿಚ್ಚ ಸುದೀಪ್‌ ಜೊತೆ ಈ ನಟಿ ಹೆಜ್ಜೆ ಹಾಕಿತ್ತಿರುವುದು?...

ಕೋಟಿಗೋಬ್ಬ 3 ರಿಲೀಸ್‌ಗೆ ಕಾಯುತ್ತಿರುವ ಕಿಚ್ಚ ಸುದೀಪ್ ಫ್ಯಾಂಟಮ್‌ ಟೀಂನಿಂದ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಬಾಲಿವುಡ್‌ನಿಂದ ಸುಂದರಿಯೊಬ್ಬರು ಸುದೀಪ್ ಜೊತೆ ಹೆಜ್ಜೆ ಹಾಕಲು ಬರುತ್ತಿದ್ದಾರೆ ಅಂತ ಕೇಳಿದ್ವಿ, ಇದೀಗ ಆಕೆ ಯಾರು ಎಂದು ರಿವೀಲ್ ಮಾಡಿದ್ದಾರೆ..

ಯಡಿಯೂರಪ್ಪನವರ ಮುಂದಿನ ಗುರಿ ಏನು? ಕಾರ್ಯಕಾರಣಿ ಸಭೆಯಲ್ಲಿ ಬಹಿರಂಗ..!...

ಶಿವಮೊಗ್ಗದಲ್ಲಿ ಇಂದು (ಭಾನುವಾರ) ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ತಮ್ಮ ಮುಂದಿನ ಗುರಿ ಬಗ್ಗೆ ತಿಳಿಸಿದರು.

ಪ್ರತಿಭಟಿಸುತ್ತಿರುವ 'ಅನ್ನದಾತ'ನಿಗೆ ಮೈ ಕೊರೆಯುವ ಚಳಿ ಮಧ್ಯೆ ಮತ್ತೊಂದು ಸಂಕಷ್ಟ!...

ಕೇಂದ್ರದ ಕೃಷಿ ಕಾನೂನು ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟಿಸುತ್ತಿರುವ ರೈತ ಅದೇನೇ ಆದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬಂತೆ ಗಟ್ಟಿಯಾಗಿ ನಿಂತಿದ್ದಾನೆ. ಆದರೀಗ ಮೈ ಕೊರೆಯುವ ಚಳಿ ಮಧ್ಯೆ ಮಳೆಯೂ ಸುರಿಯಲಾರಂಭಿಸಿದ್ದು, ರೈತನ ತಾಳ್ಮೆಗೆ ಸವಾಲೆಸೆದಂತಿದೆ.

ಲಸಿಕೆ ತುರ್ತು ಬಳಕೆಗೆ ಗ್ರೀನ್‌ ಸಿಗ್ನಲ್, ಶುಭ ಕೋರಿದ ಪಿಎಂ ಮೋದಿ!...

DCGI ಇಂದು, ಭಾನುವಾರ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್‌ನ ಕೊರೋನಾ ವೈರಸ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ. ಈ ಮೂಲಕ ಕೊರೋನಾ ಲಸಿಕೆ ಸಂಬಂಧ ದೀರ್ಘ ಕಾಲದ ಕಾಯುವಿಕೆ ಕೊನೆಗೊಂಡಿದೆ. 

ಮುಂದಿನ ಅಧಿವೇಶನದಲ್ಲಿ ಲವ್‌ಜಿಹಾದ್‌ ಕಾಯ್ದೆ ಜಾರಿ...

ಮುಂದಿನ ಅಧಿವೇಶನದಲ್ಲಿ ಲವ್‌ಜಿಹಾದ್‌ ಕಾಯ್ದೆ ಜಾರಿಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿ ನಡೆಯುತ್ತಿರುವ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಬಿಜೆಪಿ ನಾಯಕರಿಗಿಂತಲೂ ನನಗೆ ಪ್ರಧಾನಿಯೊಂದಿಗೆ ಉತ್ತಮ ಬಾಂಧವ್ಯ: ಎಚ್‌ಡಿಕೆ ಬಾಂಬ್...

ಎನ್‌ಡಿಎ ಜೊತೆ ಜೆಡಿಎಸ್ ಮೈತ್ರಿ ವಿಚಾರ ರಾಜ್ಯ ರಾಜಕಾರಣದಲ್ಲಿ ಸಂಚನ ಮೂಡಿಸುತ್ತಿದೆ. ಇದರ ಬೆನ್ನಲ್ಲೇ ಇದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.