ಹೈದರಾಬಾದ್‌ (ಫೆ. 22): ಆಜನ್ಮ ವೈರಿಗಳಂತಿದ್ದ ಕಾಂಗ್ರೆಸ್‌ ಹಾಗೂ ತೆಲುಗು ದೇಶಂ ಪಕ್ಷಗಳು ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಮಾಡಿಕೊಂಡಿದ್ದ ‘ಪ್ರಜಾಕೂಟಮಿ’ (ಪ್ರಜಾ ಒಕ್ಕೂಟ) ಲೋಕಸಭೆ ಚುನಾವಣೆಗೂ ಮುನ್ನವೇ ಬರ್ಕಾಸ್ತಾಗಿದೆ. ಲೋಕಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ನಿರ್ಧರಿಸಿರುವ ಕಾಂಗ್ರೆಸ್‌, ತೆಲಂಗಾಣದ ಎಲ್ಲ 17 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಟಿಕೆಟ್ ಫೈಟ್: ಉಡುಪಿಯಲ್ಲಿ ಕರಂದ್ಲಾಜೆ ನಿರಾಕರಿಸಿದ್ರೆ ಹೆಗ್ಡೆಗೆ ಟಿಕೆಟ್?

ಈ ಸಂಬಂಧ ತೆಲಂಗಾಣ ಎಐಸಿಸಿ ಉಸ್ತುವಾರಿ ಆರ್‌.ಸಿ. ಕುಂಟಿಯಾ ಅವರು ಪಕ್ಷದ ಕೇಂದ್ರ ಸಮಿತಿಗೆ ಶಿಫಾರಸು ರವಾನಿಸಿದ್ದಾರೆ. ಕೆ. ಚಂದ್ರಶೇಖರ ರಾವ್‌ ನೇತೃತ್ವದ ಟಿಆರ್‌ಎಸ್‌ ಅನ್ನು ಮಣಿಸಲು ಡಿ.7ರಂದು ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಗಾಗಿ ಪ್ರಜಾಕೂಟಮಿ ಅಸ್ತಿತ್ವಕ್ಕೆ ಬಂದಿತ್ತು.

ಪಾಕ್ ಮೇಲೆ 3ನೇ ಬಾಂಬ್: ಅಲ್ಲಿ ಟೊಮೆಟೊ ಇಲ್ಲ, ಅಲ್ಲಿಂದ ಸಿಮೆಂಟ್ ಬೇಕಿಲ್ಲ!

ತೆಲುಗುದೇಶಂ, ಕಾಂಗ್ರೆಸ್‌, ಸಿಪಿಐ ಹಾಗೂ ತೆಲಂಗಾಣ ಜನ ಸಮಿತಿಗಳು ಈ ಕೂಟದಲ್ಲಿದ್ದವು. ಕಾಂಗ್ರೆಸ್‌ ಹಾಗೂ ತೆಲುಗುದೇಶಂ ಕೈಜೋಡಿಸಿದ್ದರಿಂದಲೇ ಹೀನಾಯ ಸೋಲು ಅನುಭವಿಸಬೇಕಾಯಿತು ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ದವು.