Asianet Suvarna News Asianet Suvarna News

ಮೈಸೂರಿನಲ್ಲಿ ಜೀವಂತ ಬಾಂಬ್ ಪತ್ತೆ..! ತಪ್ಪಿತು ಭಾರಿ ಅನಾಹುತ

ಆಟೋ ಚಾಲಕರ ಸಮಯಪ್ರಜ್ಞೆಯಿಂದ ಮೈಸೂರಿನಲ್ಲಿ ಸಂಭವಿಸುತ್ತಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

Live Bomb Recovered in Mysore

ಮೈಸೂರು (ಡಿ.20): ಮೈಸೂರಿನ ಬಸ್ ನಿಲ್ದಾಣದ ಬಳಿ ಜೀವಂತ ಬಾಂಬ್ ಪತ್ತೆಯಾಗಿದೆ. ಮೈಸೂರಿನ ಗ್ರಾಮೀಣ  ಬಸ್ ನಿಲ್ದಾಣದ ಬಳಿಯಲ್ಲಿ ಈ ಬಾಂಬ್ ಪತ್ತೆಯಾಗಿದೆ. ಜನನಿಬಿಡ ಪ್ರದೇಶವನ್ನು ಗುರಿಯಾಗಿಸಿಕೊಂಡು ಬಾಂಬ್ ಇರಿಸಲಾಗಿತ್ತು.

ಸಾಂಸ್ಕೃತಿಕ ನಗರಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿ ಈ ಕೃತ್ಯ ಎಸಗಲಾಗಿತ್ತು. ಆದರೆ ಈ ಯತ್ನ ವಿಫಲವಾಗಿದೆ. ಬಾಕ್ಸ್ ಒಂದರಲ್ಲಿ ಐಇಡಿಯನ್ನು ಇರಿಸಲಾಗಿತ್ತು. ಬಾಕ್ಸ್'ನಲ್ಲಿ 60 ಬ್ಯಾಟರಿ ಸೆಲ್'ಗಳು ಹಾಗೂ ವೈರ್ಗಳು ಪತ್ತೆಯಾಗಿವೆ.  

ದುಷ್ಕರ್ಮಿಗಳು ಟೈಮರ್ ಅಳವಡಿಸದೇ ಬಿಟ್ಟು ಹೋಗಿದ್ದರು. ಆಟೋ ಚಾಲಕರ ಸಮಯಪ್ರಜ್ಞೆಯಿಂದ ಮೈಸೂರಿನಲ್ಲಿ ಸಂಭವಿಸುತ್ತಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

Follow Us:
Download App:
  • android
  • ios