ಹೈದರಾಬಾದ್[ಫೆ.04]  ಖ್ಯಾತ ಹಿನ್ನೆಲೆ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ತಾಯಿ ಶಕುಂತಲಮ್ಮ (89) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು  ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ನೆಲ್ಲೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ಸಂಗೀತ ಕಾರ್ಯಕ್ರಮದ ನಿಮಿತ್ತ ಬಾಲಸುಬ್ರಮಣ್ಯಂ ಲಂಡನ್‌ಗೆ ತೆರಳಿದ್ದಾರೆ. ತಾಯಿಯ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಎಸ್‍ಪಿಬಿ ಅಲ್ಲಿಂದ ಹೊರಟಿದ್ದಾರೆ.  ಶಕುಂತಲಮ್ಮ ಅಂತ್ಯಕ್ರಿಯೆ ಮಂಗಳವಾರ ನಡೆಯಲಿವೆ.