ಮುಂಬೈ: ಹೊಸದಾಗಿ ಬಿಡುಗಡೆ ಮಾಡಲಾದ 200 ರು. ಹಾಗೂ 2000 ರು. ನೋಟುಗಳು ಬಣ್ಣಗುಂದಿದ್ದರೆ ಅಥವಾ ಹರಿದುಹೋಗಿದ್ದರೆ ಅವುಗಳನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಲು ಅವಕಾಶ ಕಲ್ಪಿಸಲು ಆರ್‌ಬಿಐ ನಿರ್ಧರಿಸಿದೆ. 

ಇದುವರೆಗೆ ಇದ್ದ ನಿಯಮಗಳ ಅನ್ವಯ, ಈ ಹೊಸ ಎರಡು ನೋಟುಗಳನ್ನು ಯಾವುದೇ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಲು ಅವಕಾಶ ಇರಲಿಲ್ಲ. 

ಕೇವಲ 5, 10, 20, 50, 100, 500 ಹಾಗೂ ರದ್ದಾದ 1000 ರು. ನೋಟು ಒಳ್ಳೆಯ ಸ್ಥಿತಿಯಲ್ಲಿ ಇಲ್ಲದೇ ಇದ್ದರೆ ವಿನಿಮಯ ಮಾಡಿ ಕೊಳ್ಳಬಹುದಾಗಿತ್ತು. ಆದರೆ ಈ ನಿಯಮಗಳಿಗೆ ತಿದ್ದುಪಡಿ ತಂದು ಹೊಸ ನೋಟುಗಳನ್ನೂ ವಿನಿಮಯ ಮಾಡಲು ಅವಕಾಶ ಕಲ್ಪಿಸಲು ಆರ್‌ಬಿಐ ನಿರ್ಧರಿಸಿದೆ. ಈ ಕುರಿತು ಅದು ಶೀಘ್ರವೇ ಆದೇಶ ಹೊರಡಿಸಲಿದೆ ಎನ್ನಲಾಗಿದೆ.