Asianet Suvarna News Asianet Suvarna News

ಎಚ್‌ಡಿಕೆ, ಬಂಗಾರಪ್ಪ ಮಕ್ಕಳು ಮಾತ್ರ ರಾಜಕೀಯ ಮಾಡ್ಬೇಕಾ? ಕುಂವಿ

ಬಂಗಾರಪ್ಪ ಮಕ್ಕಳು ಹಾಗೂ  ಗೌಡರ ಮಕ್ಕಳು ಅ್ಷಟೇ ರಾಜ್ಯದಲ್ಲಿ ರಾಜಕೀಯ ಮಾಡಬೇಕೆ ಎಂದು ಸಾಹಿತಿ ಕುಂ ವೀರಬದ್ರಪ್ಪ ಕುಟುಂಬ ರಾಜಕಾರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Kum Veerabhadrappa Alma Family Politics
Author
Bengaluru, First Published Oct 4, 2018, 10:53 AM IST
  • Facebook
  • Twitter
  • Whatsapp

ಧಾರ​ವಾ​ಡ :  ‘ರಾಜ​ಕಾ​ರಣ ಬರೀ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಹಾಗೂ ಬಂಗಾ​ರ​ಪ್ಪ​ನಂಥವ​ರಿಗೆ ಮಾತ್ರ ಸೀಮಿ​ತ​ವೇ? ಅವರು ಹಾಗೂ ಅವರ ಮಕ್ಕಳು, ಮೊಮ್ಮ​ಕ್ಕಳೇ ರಾಜ​ಕೀಯ ಮಾಡ​ಬೇ​ಕಾ? ಅವರೇ ಎಂಎಲ್‌ಎ ಆಗಬೇಕಾ? ವಿಧಾ​ನ​ಸೌಧ ಇವರ ಅಪ್ಪನ ಮನೆಯ ಜಹಾ​ಗೀ​​ರಾ?’’ ಕುಟುಂಬ ರಾಜ​ಕಾ​ರ​ಣದ ವಿರುದ್ಧ ಹಿರಿಯ ಸಾಹಿತಿ ಕುಂ.ವೀ​ರ​ಭ​ದ್ರಪ್ಪ ಟೀಕಿ​ಸಿದ ರೀತಿ ಇದು.

ಕರ್ನಾಟಕ ನವ ನಿರ್ಮಾಣ ಸೇನೆ ಧಾರ​ವಾ​ಡ​ದಲ್ಲಿ ಬುಧ​ವಾರ ಆಯೋ​ಜಿ​ಸಿದ್ದ ಪ್ರತ್ಯೇಕ ರಾಜ್ಯ​ಅ​ಧಿ​ಕಾ​ರಕ್ಕೋ ಅಥವಾ ಅಭಿ​ವೃ​ದ್ಧಿಗೋ ವಿಷಯ ಕುರಿತು ವಿಚಾರ ಸಂಕಿ​ರ​ಣ​ದಲ್ಲಿ ಅವರು ಮಾತ​ನಾ​ಡಿ, ಎಲ್ಲ ಪಕ್ಷದ ರಾಜಕಾರಣಿಗಳೂ ತಮ್ಮ ಮಕ್ಕಳನ್ನು ರಾಜಕೀಯದಲ್ಲಿ ಮುನ್ನಡೆಸಲು ಯತ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾ​ನ​ಸೌ​ಧ​ದಲ್ಲಿ ನೀವೇ ತುಂಬಿ​ಕೊಂಡಿ​ರ​ಬೇ​ಕಾ? ನಾವೂ ಚುನಾ​ವ​ಣೆಗೆ ನಿಲ್ಲ​ಬೇಕು, ನಾವೂ ಎಂಎ​ಲ್‌ಎ ಆಗ​ಬೇ​ಕೆಂಬ ಆಸೆ ಯುವ​ಕ​ರಿ​ಗಿದ್ದು ಇದನ್ನು ಪ್ರಶ್ನಿ​ಸುವ ಗುಣ​ ಬೆಳೆ​ಸಿ​ಕೊಳ್ಳಬೇ​ಕು. ದೇಶದ ದೊಡ್ಡಶಕ್ತಿ ಯುವ​ಕ​ರಾ​ಗಿದ್ದು, ರಾಜ್ಯದ ಭವಿಷ್ಯ ರೂಪಿ​ಸುವಲ್ಲಿ ಪಣ​ತೊಡಿ ಎಂದ​ರು.

ಉತ್ತರ ಕರ್ನಾ​ಟ​ಕದ ಅಭಿ​ವೃ​ದ್ಧಿ​ಯ ಹಿನ್ನಡೆಗೆ ಈ ಭಾಗದ ಜನ​ಪ್ರ​ತಿ​ನಿ​ಧಿ​ಗಳೇ ಹೊರತು ಬೇರಾರು ಅಲ್ಲ. ಇಲ್ಲಿ​ನ​ ರಾಜ​ಕಾ​ರ​ಣಿ​ಗಳು ತುಂಬಾ ಡೇಂಜರ್‌. ಉತ್ತರ ಕರ್ನಾ​ಟ​ಕ​ದಲ್ಲಿ ನಿರು​ಪ​ದ್ರವಿ ಪ್ರಜೆ​ಗಳಿದ್ದಾ​ರೆ. ಹಿಂದೆ ಬಂದರೆ ಒದೆ​ಯೋ​ದಿಲ್ಲ, ಮುಂದೆ ಬಂದರೆ ಹಾಯೋ​ದಿಲ್ಲ ಎಂಬು​ದನ್ನು ಅರಿತ ಜನ​ಪ್ರ​ತಿ​ನಿ​ಧಿ​ಗಳು ಅಭಿ​ವೃ​ದ್ಧಿಗೆ ಬಂದ ಹಣ​ವನ್ನು ಕಮೀ​ಶನ್‌ ಆಧಾ​ರ​ದಲ್ಲಿ ಗಬ​ಗ​ಬನೆ ತಿನ್ನು​ತ್ತಿ​ದ್ದಾರೆ. ಜನ ನೀರು, ಆಹಾ​ರ​ಕ್ಕಾಗಿ ಪರ​ದಾ​ಡು​ತ್ತಿ​ದ್ದರೆ, ಈ ಭಾಗದ ಜನ​ಪ್ರ​ತಿ​ನಿ​ಧಿ​ಗಳು ರಾಜ​ಧಾ​ನಿ​ಯಲ್ಲಿ ಡಾಲರ್ಸ್‌ ಕಾಲೋನಿ, ಜಯ​ನ​ಗರ, ಸದಾ​ಶಿ​ವ​ನ​ಗ​ರ​ದಲ್ಲಿ ಮನೆ ಮಾಡಿ​ಕೊಂಡು ವಿಲಾಸಿ ಜೀವ​ನ ನಡೆ​ಸು​ತ್ತಿ​ದ್ದಾರೆ. ಬೆಂಗ​ಳೂ​ರಿ​ನಲ್ಲಿ ಒಬ್ಬೊ​ಬ್ಬರು ಹತ್ತತ್ತು ಸೈಟ್‌​ಗ​ಳನ್ನು ಮಾಡಿ​ಟ್ಟಿ​ದ್ದಾ​ರೆ. ಅವರ ಮಕ್ಕ​ಳನ್ನು ಆಸ್ಪ್ರೇ​ಲಿಯಾ, ಜರ್ಮನ್‌ ದೇಶ​ಗ​ಳಲ್ಲಿ ಕಲಿ​ಸು​ತ್ತಿ​ದ್ದಾರೆ. ಇವ​ರನ್ನು ಹೀಗೆ ಬಿಟ್ಟರೆ ಇಡೀ ಕರ್ನಾ​ಟ​ಕ​ವನ್ನು ನುಂಗಿ ನೀರು ಕುಡಿ​ಯು​ತ್ತಾರೆ ಎಂದು ಟೀಕಿಸಿದರು.

ಪಾವಿತ್ರ್ಯ ಕಳೆದುಕೊಂಡ ಸೌಧ: ವಿಧಾ​ನ​ಸೌ​ಧ​ದಲ್ಲಿ ಈಗ ಮೊದ​ಲಿದ್ದ ಪಾವಿ​ತ್ರ್ಯ ಉಳಿ​ದಿಲ್ಲ. ಬಿಗ್‌ ಬಜಾರ್‌ ರೀತಿ ಆಗಿದೆ. ಶಾಸ​ಕ​ರನ್ನು ಕೋಟಿ-ಕೋಟಿಗೆ ಹರಾಜು ಹಾಕುವ ಸಂತೆ​ಯಾ​ಗಿದೆ. ಜನ​ಪ್ರ​ತಿ​ನಿ​ಧಿ​ಗಳು ಕೋಳಿ, ಕುರಿ, ನಾಯಿ​ಗಳಾ? ಅವ​ರನ್ನು ಎಲ್ಲೆ​ಲ್ಲಿಯೋ ಕರೆ​ದು​ಕೊಂಡು ಹೋಗಿ ಬಚ್ಚಿ​ಡ​ಲಾ​ಗು​ತ್ತಿದೆ. ಒಟ್ಟಾರೆ ರಾಜ್ಯ​ದಲ್ಲಿ ಅರಾ​ಜ​ಕತೆ ಉಂಟಾ​ಗು​ತ್ತಿದೆ. ಇದ​ರೊಂದಿಗೆ ಧರ್ಮದ ಹೆಸ​ರಿ​ನಲ್ಲಿ ಹಲ್ಲೆ​ಗಳು ನಡೆ​ಯು​ತ್ತಿ​ವೆ. ನೈತಿಕ ಪೊಲೀ​ಸ್‌​ಗಿರಿ ನಡೆ​ಯು​ತ್ತಿದೆ. ಸ್ಥಳೀಯ ಸಮ​ಸ್ಯೆ​ಗ​ಳಿಂದ ಹೀಗಾ​ಗು​ತ್ತಿದ್ದು, ಸ್ಥಳೀ​ಯ​ವಾಗಿ ಆ ಸಮ​ಸ್ಯೆ​ಗ​ಳಿಗೆ ಪರಿ​ಹಾರ ಒದ​ಗಿ​ಸುವ ಪ್ರಯ​ತ್ನ​ಗಳು ನಡೆ​ಯ​ಬೇ​ಕಿದೆ ಎಂದರು.

ಇವೇವೇಳೆ ಉತ್ತರ ಕರ್ನಾಟಕದ ರಾಜಕಾರಣಿಗಳ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ ಅವರು, ಉತ್ತರ ಕರ್ನಾ​ಟ​ಕವು ಅಭಿ​ವೃದ್ಧಿಯಲ್ಲಿ ಹಿಂದೆ ಬೀಳಲು ಇಲ್ಲಿನ ರಾಜ​ಕಾ​ರ​ಣಿ​ಗಳೇ ಕಾರ​ಣ ಹೊರತು ಬೇರಾರೂ ಅಲ್ಲ. ಅಭಿ​ವೃ​ದ್ಧಿಯ ಹಣ​ವನ್ನು ಕಮೀ​ಶನ್‌ ಆಧಾ​ರದ ಮೇಲೆ ನುಂಗು​ತ್ತಿ​ದ್ದಾ​ರೆ. ಆದ್ದ​ರಿಂದ ಅಭಿ​ವೃ​ದ್ಧಿ​ಗಾಗಿ ನಿಮ್ಮ ಜನ​ಪ್ರ​ತಿ​ನಿ​ಧಿ​ಗ​ಳನ್ನೇ ಪ್ರಶ್ನಿಸಿ ಎಂದರು.

ಈ ಜನ​ಪ್ರ​ತಿ​ನಿ​ಧಿ​ಗಳ ಕೊರಳು ಪಟ್ಟಿಹಿಡಿದು ಪ್ರಶ್ನಿ​ಸುವ ಮನೋ​ಭಾ​ವನೆ ಬೆಳೆ​ಸಿ​ಕೊ​ಳ್ಳ​ಬೇಕೆ ಹೊರತು ಪ್ರತ್ಯೇಕ ಕರ್ನಾ​ಟ​ಕದ ಮಾತು ಬೇಡ ಎಂಬ ಸಲ​ಹೆ​ಯನ್ನು ಹಿರಿಯ ಸಾಹಿತಿ ಕುಂ. ವೀರ​ಭ​ದ್ರಪ್ಪ ನೀಡಿದರು. ಉತ್ತರ ಕರ್ನಾ​ಟ​ಕ​ದಲ್ಲಿ ನಿರು​ಪ​ದ್ರವಿ ಪ್ರಜೆ​ಗಳಿದ್ದಾ​ರೆ. ಹಿಂದೆ ಬಂದರೆ ಒದೆ​ಯೋ​ದಿಲ್ಲ, ಮುಂದೆ ಬಂದರೆ ಹಾಯೋ​ದಿಲ್ಲ ಎಂಬು​ದನ್ನು ಅರಿತ ಜನ​ಪ್ರ​ತಿ​ನಿ​ಧಿ​ಗಳು ಅಭಿ​ವೃ​ದ್ಧಿಗೆ ಬಂದ ಹಣ​ವನ್ನು ಕಮೀ​ಶನ್‌ ಆಧಾ​ರ​ದಲ್ಲಿ ಗಬ​ಗ​ಬನೆ ತಿನ್ನು​ತ್ತಿ​ದ್ದಾರೆ. ವಿಲಾಸಿ ಹೋಟೆ​ಲ್‌​ಗ​ಳಲ್ಲಿ ಕುಳಿತು ಅಧಿ​ಕಾ​ರಿ​ಗ​ಳೊಂದಿಗೆ ಕಮಿ​ಶನ್‌ ವ್ಯವ​ಹಾರ ಮಾಡು​ತ್ತಿದ್ದಾರೆ. ಈ ಭಾಗದ ಜನ ನೀರು, ಆಹಾ​ರ​ಕ್ಕಾಗಿ ಪರ​ದಾ​ಡು​ತ್ತಿ​ದ್ದರೆ, ಈ ಭಾಗದ ಜನ​ಪ್ರ​ತಿ​ನಿ​ಧಿ​ಗಳು ರಾಜ​ಧಾ​ನಿ​ಯಲ್ಲಿ ಡಾಲರ್ಸ್‌ ಕಾಲೋನಿ, ಜಯ​ನ​ಗರ, ಸದಾ​ಶಿ​ವ​ನ​ಗ​ರ​ದಲ್ಲಿ ಮನೆ ಮಾಡಿ​ಕೊಂಡು ವಿಲಾಸಿ ಜೀವ​ನ ನಡೆ​ಸು​ತ್ತಿ​ದ್ದಾರೆ. ಬೆಂಗ​ಳೂ​ರಿ​ನಲ್ಲಿ ಒಬ್ಬೊ​ಬ್ಬರು ಹತ್ತತ್ತು ಸೈಟ್‌​ಗ​ಳನ್ನು ಮಾಡಿ​ಟ್ಟಿ​ದ್ದಾ​ರೆ. ಅವರ ಮಕ್ಕ​ಳನ್ನು ಆಸ್ಪ್ರೇ​ಲಿಯಾ, ಜರ್ಮನ್‌ ದೇಶ​ಗ​ಳಲ್ಲಿ ಕಲಿ​ಸು​ತ್ತಿ​ದ್ದಾರೆ. ಇವ​ರನ್ನು ಹೀಗೆ ಬಿಟ್ಟರೆ ಇಡೀ ಕರ್ನಾ​ಟ​ಕ​ವನ್ನು ನುಂಗಿ ನೀರು ಕುಡಿ​ಯು​ತ್ತಾರೆ ಎಂದು ಆರೋಪಿಸಿದರು.

Follow Us:
Download App:
  • android
  • ios