ಬೆಂಗಳೂರು (ಜ.04): ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೆ ಐಟಿ ದಾಳಿ ನಡೆದಿದೆ.  ಹೆಲಿಕಾಪ್ಟರ್ ನಲ್ಲಿ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದಿದ್ದೇ ಯಶ್ ಸಂಕಷ್ಟಕ್ಕೆ ಕಾರಣವಾಯ್ತಾ ಎಂಬ ಮಾತು ಕೇಳಿ ಬರುತ್ತಿದೆ. 

ಚಂ'ಧನ’ವನಕ್ಕೆ ಐಟಿ ಅಧಿಕಾರಿಗಳು ನುಗ್ಗಿದ್ದೇಕೆ?: ಬಯಲಾಯ್ತು ಕಾರಣ!

ಕುಕ್ಕೆಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದವರಿಗೆ ಸಂಕಷ್ಟ ಎದುರಾಗುತ್ತದೆ ಎನ್ನುವ ನಂಬಿಕೆ ಇದೆ.  ಕುಕ್ಕೆಗೆ ಹೆಲಿಕಾಪ್ಟರ್ ನಲ್ಲಿ ಬಂದು ಅಧಿಕಾರ, ಅಂತಸ್ತು ಕಳೆದುಕೊಂಡಿದ್ದಾರೆ ಗಣ್ಯರು. ಈ ಹಿಂದೆ ಹೆಲಿಕಾಪ್ಟರ್ ನಲ್ಲಿ ಬಂದು ಅಧಿಕಾರ ಕಳೆದುಕೊಂಡಿದ್ದಾರೆ ರಾಜಕಾರಣಿಗಳು. ಮಹಾರಾಷ್ಟ್ರ ಸಿಎಂ ವಿಲಾಸ್ ರಾವ್ ದೇಶ್ ಮುಖ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಕರ್ನಾಟಕ ಸಿಎಂ ಆಗಿದ್ದ ಧರಂ ಸಿಂಗ್ ಅಧಿಕಾರಕ್ಕೆ ಕುತ್ತು ಬಂದಿತ್ತು. ವಿಜಯಮಲ್ಯಗೂ ಸಹ ಹೆಲಿಕಾಪ್ಟರ್ ಲ್ಯಾಂಡಿಂಗ್ ಕುತ್ತು ತಂದಿತ್ತು.  ಹೀಗಾಗಿ ಕುಕ್ಕೆ ಪರಿಸರದಲ್ಲಿ ಹೆಲಿಕಾಪ್ಟರ್ ಹಾರಾಟ ಕಂಠಕ ಅನ್ನೋ ನಂಬಿಕೆಯಿದೆ. 

ಐಟಿ ದಾಳಿಯಾಗಿದ್ದು ಇವರ ಮೇಲೆ, ಆದರೆ ಟಾರ್ಗೆಟ್‌ ಆಗಿದ್ದು ಇನ್ಯಾರೋ!

ಕಳೆದ  ಡಿ. 16 ರಂದು ಕುಕ್ಕೆಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದ ನಟ ಯಶ್ ಕುಮಾರಧಾರ ಬಳಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ದೇವರ ದರ್ಶನ ಪಡೆದಿದ್ದಾರೆ.  ಯಶ್ ಮನೆ ಐಟಿ ದಾಳಿಗೂ ಕುಕ್ಕೆ ಸುಬ್ರಹ್ಮಣ್ಯಕ್ಕೂ ಸಂಬಂಧ ಇದೆ ಎನ್ನಲಾಗುತ್ತಿದೆ.