Asianet Suvarna News Asianet Suvarna News

ಅರೇ..! ಇದೇನಿದು..ಬೀಚ್ ಗೆ ಹೋಗೋರಿಗೆ ಡ್ರೆಸ್ ಕೋಡ್ ಅಂತೆ..!

ಪುರುಷರು ಬೀಚ್ ನಲ್ಲಿ  ತುಂಡುಡುಗೆ ಹಾಕಿ ಮೊಜು ಮಸ್ತಿಯಿಂದ  ಬೀಚ್ ಗೆ ಬರುವ ಮಹಿಳೆಯರಿಗೆ ಮುಜುಗುರ ಉಂಟಾಗುತ್ತಿದೆಯಂತೆ. ಹೀಗಾಗಿ ಬೀಚ್ ಡ್ರೆಸ್ ಬದಲಾಗ್ಬೇಕಂತೆ।  ಹೀಗಂತ ಹೇಳಿದ್ಯಾರು? 

KSCW chairperson Nagalakshmi Bai angry over Men Beach Wear
Author
Bengaluru, First Published Nov 17, 2018, 10:29 PM IST

ಬೆಂಗಳೂರು, [ನ.17]: ಬೀಚ್ ನಲ್ಲಿ  ತುಂಡುಡುಗೆ ಹಾಕಿ ಮೊಜು ಮಸ್ತಿ ಮಾಡುವ ಪುರುಷರ ವಿರುದ್ಧ , ಮಹಿಳಾ ಆಯೋಗದ ಅಧ್ಯಕ್ಷೆ   ನಾಗಲಕ್ಷ್ಮೀಬಾಯಿ ಗರಂ ಆಗಿದ್ದಾರೆ. 

ಕರ್ನಾಟಕದ ಬೀಚ್ ನಲ್ಲಿ ವ್ಯವಸ್ಥೆ ಹದಗೆಟ್ಟು ಹೋಗಿದೆ. ಬೀಚ್ ನಲ್ಲಿ ಪುರುಷರು ಬೆತ್ತಲೆಯಾಗಿ ತಿರುಗಾಡುತ್ತಾರೆ. ಇದ್ರಿಂದ ಬೀಚ್ ಗೆ ಬರುವ ಮಹಿಳೆಯರಿಗೆ ಮುಜುಗುರ ಉಂಟಾಗುತ್ತಿದ್ದೆ. 

ಸರ್ಕಾರ ಇದರ ಗಮನ ಹರಿಸಿ, ಅದರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಅಂತ ಸಿಎಂ ಕುಮಾರಸ್ವಾಮಿಗೆ ನಾಗಲಕ್ಷ್ಮೀಬಾಯಿ ಪತ್ರ ಬರೆದಿದ್ದಾರೆ. 

ಪ್ರವಾಸದ ವೇಳೆ ಬೀಚ್ ನಲ್ಲಿರೋ ಅವ್ಯವಸ್ಥೆ , ಸ್ವತಹ ನಾಗಲಕ್ಷ್ಮೀ ಬಾಯಿಗೆ ಅನುಭವವಾಗಿದೆ. ಹೀಗಾಗಿ ಸಿಎಂ ಅವರಿಗೆ ಪತ್ರ ಬರೆಯಲಾಗಿದೆ ಎಂದು ನಾಗಲಕ್ಷ್ಮೀಬಾತಯಿ ಹೇಳಿದ್ದಾರೆ. 

Follow Us:
Download App:
  • android
  • ios