ಮಂಡ್ಯ: ಕೊಡಗು ಮತ್ತು ಹಾಸನ ಜಿಲ್ಲೆಗಳ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ರಾಜ್ಯದ ಪ್ರಮುಖ ಜಲಾಶಯವಾದ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ121.40 ಅಡಿಗೇರಿದ್ದು ಭರ್ತಿಗೆ ಕೇವಲ 3 ಅಡಿಯಷ್ಟೇ ಬಾಕಿ ಇದೆ. ಇನ್ನೊಂದೆರಡು ದಿನಗಳಲ್ಲಿ ಜಲಾಶಯ ಸಂಪೂರ್ಣ ತುಂಬುವ ಸಾಧ್ಯತೆಯಿದ್ದು ಜುಲೈ 20ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲು ಸಿದ್ಧತೆ ಮಾಡಲಾಗುತ್ತಿದೆ.

ಶುಕ್ರವಾರ ಸಂಜೆ 6 ಗಂಟೆ ವೇಳೆಗೆ ಕೃಷ್ಣರಾಜಸಾಗರ ಜಲಾಶಯದಲ್ಲಿ 121.40 ನೀರು ಸಂಗ್ರಹವಾಗಿತ್ತು. ಭರ್ತಿಗೆ 3 ಅಡಿ ಮಾತ್ರ ಬಾಕಿ ಇದೆ. ಇಂದಿನ ಒಳ ಹರಿವು 37,950 ಕ್ಯುಸೆಕ್‌, ಹೊರ ಹರಿವು 3916 ಕ್ಯುಸೆಕ್‌ ಇದೆ. ಕೃಷ್ಣರಾಜಸಾಗರ ಜಲಾಶಯದ ನಂತರ ಕಬಿನಿ ಜಲಾಶಯಕ್ಕೂ ಭೇಟಿ ನೀಡಲಿರುವ ಸಿಎಂ ಕುಮಾರಸ್ವಾಮಿ ಬಾಗೀನ ಅರ್ಪಿಸಲಿದ್ದಾರೆ. ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು 2282 ಅಡಿ(ಗರಿಷ್ಠ ಮಟ್ಟ2284) ನೀರಿದೆ.