ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಆಕರ್ಷಕ ಸೆಂಚುರಿ ಸಿಡಿಸಿ ಟೀಂ ಇಂಡಿಯಾಗೆ ಆಸರೆಯಾಗಿದ್ದಾರೆ. ಬಜೆಟ್ ಶ್ರೀಮಂತರ ಪರ ಎಂದ ವಿಪಕ್ಷಕ್ಕೆ ನಿರ್ಮಲಾ ತಕ್ಕ ತಿರುಗೇಟು ನೀಡಿದ್ದಾರೆ. ಕೇಂದ್ರದ ಆಕ್ರೋಶಕ್ಕೆ ಶೇ.97ರಷ್ಟು ಟ್ವಿಟರ್ ಖಾತೆ ಬ್ಲಾಕ್ ಮಾಡಲಾಗಿದೆ. ಹೊಸ ಗೆಟಪ್‌ನಲ್ಲಿ ಕಿಚ್ಚ ಸುದೀಪ್, ರಾಹುಲ್ ಗಾಂಧಿ ವೈರಲ್ ವಿಡಿಯೋ ಸೇರಿದಂತೆ ಫೆಬ್ರವರಿ 13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಕೋಣೆ ಕಂಪಿಸುತ್ತಿದೆ, ಇದು ಭೂಕಂಪನ; ಲೈವ್‌ನಲ್ಲಿ ರಾಹುಲ್ ಗಾಂಧಿ ಹೇಳಿದ ಮಾತು ವೈರಲ್!...
ಪಂಜಾಬ್, ದೆಹಲಿ ಹಾಗೂ ಉತ್ತರ ಭಾರತದಲ್ಲಿ ನಿನ್ನೆ(ಫೆ.12)ರಾತ್ರಿ ಸಂಭವಿಸಿದ ಭೂಕಂಪನ ರಿಕ್ಟರ್ ಮಾಕಪದಲ್ಲಿ 6.1ತೀವ್ರತೆ ದಾಖಲಾಗಿದೆ. ಹಲವರು ಮನೆಯಿಂದ, ಕಚೇರಿಗಳಿಂದ ಹೊರಗೋಡಿ ಬಂದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೈವ್ ಮಾತುಕತೆಯಲ್ಲಿದ್ದರು. ರಾಹುಲ್ ಲೈವ್‌ನಲ್ಲೇ ಭೂಕಂಪನ ಕುರಿತು ಆಡಿದ ಮಾತು ವೈರಲ್ ಆಗಿದೆ.
ಬಜೆಟ್ ಶ್ರೀಮಂತರ ಪರ ಎಂದ ವಿಪಕ್ಷಕ್ಕೆ ನಿರ್ಮಲಾ ತಿರುಗೇಟು!...
2021ರ ಕೇಂದ್ರ ಬಜೆಟ್ ಶೀಮಂತರ ಪರವಾಗಿದೆ ವಿಪಕ್ಷಗಳು ಸುಳ್ಳು ಕತೆಕಟ್ಟುತ್ತಿವೆ| ಬಜೆಟ್ ಶ್ರೀಮಂತರ ಪರ ಎಂದ ವಿಪಕ್ಷಕ್ಕೆ ನಿರ್ಮಲಾ ತಿರುಗೇಟು
ರಾಮ ಮಂದಿರ ದೇಣಿಗೆ ಸಂಗ್ರಹಕಾರನ ಕೊಲೆ!...
ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಬಜರಂಗ ದಳದ ಕಾರ‍್ಯಕರ್ತ ರೋಹಿತ್ ಶರ್ಮಾ (25) ಎಂಬಾತನನ್ನು ಚೂರಿ ಇರಿದು ಕೊಲೈಗೈದಿರುವ ಘಟನೆ ಬುಧವಾರ ರಾತ್ರಿ ದೆಹಲಿಯಲ್ಲಿ ನಡೆದಿದೆ.
ಕೇಂದ್ರದ ಆಕ್ರೋಶಕ್ಕೆ ಟ್ವೀಟರ್ ಥಂಡಾ: ಶೇ.97ರಷ್ಟು ಖಾತೆ ಬ್ಲಾಕ್!...
ಕೇಂದ್ರದ ಆಕ್ರೋಶಕ್ಕೆ ಟ್ವೀಟರ್ ಥಂಡಾ| ಸರ್ಕಾರ ಸೂಚಿಸಿದ್ದ ಶೇ.97ರಷ್ಟುಖಾತೆಗಳನ್ನು ಬ್ಲಾಕ್ ಮಾಡಿದ ಜಾಲತಾಣ| ರೈತ ಹೋರಾಟ ಕುರಿತು ಪ್ರಚೋದನಕಾರಿ ಮಾಹಿತಿ ಬಿತ್ತರಿಸುತ್ತಿದ್ದ ಖಾತೆಗಳು| ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದಿದ್ದ ಟ್ವೀಟರ್ ಸಂಸ್ಥೆಯಿಂದ ದಿಢೀರ್ ನಿರ್ಧಾರ
ಹಿಟ್‌ಮ್ಯಾನ್ ರೋಹಿತ್ ಸೆಂಚುರಿ; ಜೈ ಹೋ ಎಂದ ಕ್ರಿಕೆಟ್ ಫ್ಯಾನ್ಸ್...
ಹಿಟ್‌ಮ್ಯಾನ್ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ. ರೋಹಿತ್ ಬ್ಯಾಟಿಂಗ್ ಕಂಡ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಯ ಮಹಾಪೂರವೇ ಹರಿಸಿದ್ದಾರೆ.
ಕಿಚ್ಚ ಸುದೀಪ್ ಹೊಸ ಅವತಾರ ವೈರಲ್; ಜೋಯಿಸರ ಲುಕ್ ಯಾವ ಪ್ರಾಜೆಕ್ಟ್‌ಗೆ?...
ಚಿತ್ರರಂಗದ ಎಂಟ್ರಿ ಸಿಲ್ವರ್ ಜುಬಿಲಿ ಸೆಲೆಬ್ರೇಷನ್ ಮುಗಿಸಿ ಚಿತ್ರೀಕರಣಕ್ಕೆ ಮರಳುವಷ್ಟರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. ಇದ್ಯಾವ ಚಿತ್ರದ್ದು ಎಂದು ಅಭಿಮಾನಿಗಳು ಪ್ರಶ್ನೆ ಮಾಡುವ ಮುನ್ನವೇ ಕಲರ್ಸ್ ಕನ್ನಡ ವಾಹಿನಿ ಕ್ಲಾರಿಟಿ ನೀಡಿದೆ.
ಶಿಲ್ಪಾ ಶೆಟ್ಟಿಯ ರೆಡ್ ಸ್ಯಾರಿ ಫೋಟೋ ಸಖತ್ ವೈರಲ್!...
ಕೆಲವು ದಿನಗಳ ಹಿಂದೆ ಶಿಲ್ಪಾರ ಕೆಲವು ಫೋಟೋ ಮತ್ತು ವಿಡೀಯೋಗಳು ಹೊರಬಿದ್ದಿವೆ. ಅದರಲ್ಲಿ ಅವರು ಕೆಂಪು ಸೀರೆ ಹಾಗೂ ಓಪನ್ ಹೇರ್ ಲುಕ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಶಿಲ್ಪಾರ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮಾಹಿತಿ ಸೋರಿಕೆ ನಿಲ್ಲಿಸಿದ್ದೇವೆ, ಚೀನಾ ಹೂಡಿಕೆ ತಪ್ಪಿಸುತ್ತಿದ್ದೇವೆ!...
ಭಾರತದ ಟ್ವೀಟರ್ ಎಂದೇ ಪ್ರಸಿದ್ಧವಾಗಿರುವ ಹಾಗೂ ಮೂರು ದಿನಗಳಿಂದ ದೊಡ್ಡ ಪ್ರಮಾಣದಲ್ಲಿ ನೋಂದಣಿ ಕಾಣುತ್ತಿರುವ ‘ಕೂ’ ಆ್ಯಪ್ ಬಗ್ಗೆ ಕೆಲ ವಿವಾದಗಳು ಕೇಳಿಬಂದಿದ್ದು, ಅದಕ್ಕೆ ಕಂಪನಿ ಸ್ಪಷ್ಟನೆ ನೀಡಿದೆ.
ವಾರಾಂತ್ಯಕ್ಕೆ ಚಿನ್ನದ ದರದಲ್ಲಿ ದಾಖಲೆಯ ಕುಸಿತ, ಬೆಳ್ಳಿಯೂ ಅಗ್ಗ!...
ಕೇಂದ್ರ ಬಜೆಟ್ ಮಂಡನೆ ಬಳಿಕ ಏಕಾಏಕಿ ಕುಸಿದಿದ್ದ ಚಿನ್ನದ ದರ ಮತ್ತೆ ಹಾವೇಣಿ ಆಟ ಆರಂಭಿಸಿತ್ತು.
ಹೊಸ ಅವತಾರದಲ್ಲಿ, ಸ್ಪೋರ್ಟಿ ಕ್ಲಾಸಿಕ್ ಜಾವಾ 42 ಬೈಕ್ ಬಿಡುಗಡೆ!...
ಐಕಾನಿಕ್ ಜಾವಾ ಸ್ಕೂಟರ್ ಪುನರ್ ಆಗಮನದ ಮೂಲಕ ದೇಶದಲ್ಲಿ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಜಾವಾ 42 ಮತ್ತಷ್ಟು ಸ್ಪೋರ್ಟಿ ಲುಕ್ ಹಾಗೂ ಕ್ಲಾಸಿಕ್ ವಿನ್ಯಾಸದೊಂದಿಗೆ ಬಿಡುಗಡೆಯಾಗಿದೆ. ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 13, 2021, 4:59 PM IST