Asianet Suvarna News Asianet Suvarna News

ಕೋಟಿ ಕೋಟಿ ಆಸ್ತಿ ಒಡೆಯನ ಅಮಾನತು..?

ಕೋಟಿ ಕೋಟಿ ರು. ಮೌಲ್ಯದ ಆಸ್ತಿ ಒಡೆಯ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ ಅವರನ್ನು ಸರ್ಕಾರವು ಅಮಾನತುಗೊಳಿಸಿದೆ ಎಂದು ಮೂಲಗಳು ಹೇಳಿವೆ.

KIADB Officer TR Swamy Suspended
Author
Bengaluru, First Published Oct 10, 2018, 9:10 AM IST
  • Facebook
  • Twitter
  • Whatsapp

ಬೆಂಗಳೂರು : ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ದಾಳಿಯಲ್ಲಿ ಪತ್ತೆಯಾದ ಕೋಟಿ ಕೋಟಿ ರು. ಮೌಲ್ಯದ ಆಸ್ತಿ ಒಡೆಯ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ ಅವರನ್ನು ಸರ್ಕಾರವು ಅಮಾನತುಗೊಳಿಸಿದೆ ಎಂದು ಮೂಲಗಳು ಹೇಳಿವೆ.

ಎಸಿಬಿ ಅಧಿಕಾರಿಗಳ ವಿಚಾರಣೆಗೆ ಗೈರಾಗಿ ಅನಾರೋಗ್ಯ ನೆಪಹೇಳಿ ಆಸ್ಪತ್ರೆಗೆ ದಾಖಲಾಗಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಎಸಿಬಿ ಮತ್ತು ಕೈಗಾರಿಕೆ ಇಲಾಖೆಯ ಶಿಫಾರಸ್ಸಿನ ಮೇರೆಗೆ ಸ್ವಾಮಿಯನ್ನು ಅಮಾನತುಗೊಳಿಸಲಾಗಿದೆ. ಅಧಿಕೃತ ಆದೇಶ ಹೊರಬೀಳಬೇಕಿದೆ
ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಶುಕ್ರವಾರ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಸ್ವಾಮಿ ಅವರಿಗೆ ಸೇರಿದ ಸ್ಥಳಗಳಲ್ಲಿ 4.52 ಕೋಟಿ  ನಗದು, ಕುಟುಂಬದವರ ಮತ್ತು ಸಂಬಂಧಿಕರ ಹೆಸರಲ್ಲಿ 8 ಮನೆ, 11 ನಿವೇಶನಗಳು, ವಿವಿಧೆಡೆ 14 ಎಕರೆ ಕೃಷಿ ಜಮೀನು, 1.6 ಕೆಜಿ ಚಿನ್ನ, 7.5 ಕೆಜಿ ಬೆಳ್ಳಿ, ಐಷರಾಮಿ ಕಾರ್‌ಗಳು ಪತ್ತೆಯಾಗಿದ್ದವು.

Follow Us:
Download App:
  • android
  • ios