Asianet Suvarna News Asianet Suvarna News

ಬ್ರೆಡ್‌ನಲ್ಲಿ ಸೈನೈಡ್ ಬೆರೆಸಿ 2 ವರ್ಷದ ಮಗು ಕೊಂದಳಾಕೆ!

2 ವರ್ಷದ ಮಗುವಿಗೆ ಬ್ರೆಡ್‌ನಲ್ಲಿ ಸೈನೈಡ್‌ ಬೆರೆಸಿ ಕೊಂಡಿದ್ದ ಜಾಲಿ| ಕೇರಳ ಮೂಲದ ಸೈನೇಡ್‌ ಸರಣಿ ನರಹಂತಕಿಯ ಕೃತ್ಯ

Keralas Killer Jolly Kills 2 Year Baby By Applying Cyanide on bread
Author
Bangalore, First Published Oct 14, 2019, 8:49 AM IST

ಕಲ್ಲಿಕೋಟೆ[ಅ.14]: ವಿವಿಧ ಆಹಾರ ಮತ್ತು ಪಾನೀಯಗಳಲ್ಲಿ ಸೈನೈಡ್‌ ಬೆರೆಸಿ ತನ್ನ ಅತ್ತೆ-ಮಾವ, ಗಂಡ ಮತ್ತು ಚಿಕ್ಕಪ್ಪ ಸೇರಿದಂತೆ ತನ್ನದೇ ಕುಟುಂಬದ 6 ಮಂದಿಯನ್ನು ನಿಗೂಢವಾಗಿ ಕೊಲೆಗೈದಿದ್ದ ಕೇರಳ ಮೂಲದ ಸೈನೆಡ್‌ ಸರಣಿ ಕಿಲ್ಲರ್‌, ಈ ಪೈಕಿ ಎರಡು ವರ್ಷದ ಹೆಣ್ಣು ಮಗುವಿಗೂ ಸೈನೇಡ್‌ ಬೆರೆಸಿದ ಬ್ರೆಡ್‌ ಅನ್ನು ತಿನ್ನಿಸಿ ಹತ್ಯೆ ಮಾಡಿದ್ದಳು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಜೋಲಿ ಸೈನೈಡ್‌ ಬೆರೆಸಿ ಬ್ರೆಡ್‌ ಸೇವಿಸಿ ಸಾವನ್ನಪ್ಪಿದ ಮಗುವನ್ನು ಆಲ್ಫೈನ್‌ ಎಂದು ಗುರುತಿಸಲಾಗಿದೆ.

‘ಸೈನೈಡ್‌ ಸೊಸೆ’ಗೆ ಕೇರಳದಲ್ಲಿ 6 ಜನ ಬಲಿ!

47 ವರ್ಷದ ಜೋಲಿ ಅಮ್ಮ ಜೋಸೆಫ್‌ ಶಿಕ್ಷಿತ ಮಹಿಳೆಯಾಗಿದ್ದು, ತನ್ನ ಮೊದಲ ಗಂಡನ ಕುಟುಂಬದ ಸರ್ವನಾಶಕ್ಕಾಗಿ ಕಳೆದ ಎರಡು ದಶಕಗಳಲ್ಲಿ ಯಾರಿಗೂ ಅನುಮಾನವೇ ಬಾರದಂತೆ ತಿನಿಸು ಹಾಗೂ ಪಾನೀಯಗಳಲ್ಲಿ ಸೈನೈಡ್‌ ಬೆರೆಸಿ ತನ್ನ ಬಂಧು-ಬಳಗದವರನ್ನೇ ಹತ್ಯೆ ಮಾಡಿದ್ದಳು. 2 ವರ್ಷದ ಆಲ್ಫೈನ್‌ ಜೋಲಿಯ ಮೊದಲ ಗಂಡ ರಾಯ್‌ ಥಾಮಸ್‌ ಅವರ ಸೋದರಿ ಸಿಲಿ ಹಾಗೂ ಶಾಜು ಎಂಬ ದಂಪತಿಯ ಮಗುವಾಗಿದೆ. ಒಂದೆಡೆ, ರಾಯ್‌ ಥಾಮಸ್‌ ಹಾಗೂ ಆತನ ಸೋದರಿ ಸಿಲಿಯನ್ನು ಆಹಾರದಲ್ಲಿ ಸೈನೇಡ್‌ ಬೆರೆಸಿ ಕೊಂದಿದ್ದ ಜೋಲಿ ಅಮ್ಮ ಜೋಸೆಫ್‌, ಆ ಬಳಿಕ ಸಿಲಿಯ ಪತಿ ಶಾಜುವನ್ನೇ ಮದುವೆಯಾಗಿದ್ದಳು.

ಅತ್ತೆಗೆ ಸೂಪ್‌ನಲ್ಲಿ, ಚಿಕ್ಕಪ್ಪನಿಗೆ ಕಾಫಿಯಲ್ಲಿ ಸೈನೈಡ್‌ ಹಾಕಿ ಕೊಲೆ!

ಹೀಗಾಗಿ, ಜೋಲಿಯ ಎಲ್ಲ ಕೃತ್ಯಗಳು ಶಾಜುವಿಗೆ ತಿಳಿದಿದ್ದವೇ ಎಂಬುದರ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿಚಾರಣೆ ವೇಳೆ ತಾನು 2015ರಿಂದಲೂ ಸೈನೇಡ್‌ ಅನ್ನು ತನ್ನ ಬ್ಯಾಗಿನಲ್ಲೇ ಇಟ್ಟುಕೊಂಡು ತಿರುಗಾಡುತ್ತಿದ್ದೆ. ತನ್ನ ಮೊದಲ ಪತಿ ಥಾಮಸ್‌ ರಾಯ್‌ ಕುಟುಂಬದ ಸರ್ವನಾಶ ನನ್ನ ಗುರಿಯಾಗಿತ್ತು. ಯಾರನ್ನೇ ಕೊಲೆ ಮಾಡಿದರೂ, ಯಾರೂ ನನಗೆ ಪ್ರಶ್ನಿಸುವವರೇ ಇರಲಿಲ್ಲ. ಇದು ನನ್ನ ಮುಂದಿನ ಕೊಲೆಗೆ ಧೈರ್ಯ ತುಂಬಿತ್ತು ಎಂದು ಜೋಲಿ ಪೊಲೀಸರಿಗೆ ಹೇಳಿದ್ದಾಳೆ ಎಂದು ವರದಿಯಾಗಿದೆ.

Follow Us:
Download App:
  • android
  • ios