ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಗೆ ಬ್ರಾ ಬಿಚ್ಚಿಸಿ ಅವಮಾನ

Kerala Girl who alleged Harassment at Neet Exam
Highlights

ಒಬ್ಬಳು ವಿದ್ಯಾರ್ಥಿನಿಯು  ಪರೀಕ್ಷೆಯಲ್ಲಿ ನಕಲಿ ಮಾಡುತ್ತಿರುವ ಬಗ್ಗೆ ಕೊಠಡಿಯ ಪರಿವೀಕ್ಷಕರು ಅನುಮಾನಗೊಂಡಿದ್ದಾರೆ. ಆಕೆಯನ್ನು ಪರೀಕ್ಷಿಸಿದ್ದಲ್ಲದೆ ಬ್ರಾ ಬಿಚ್ಚಿಸಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಆಕೆ ಪ್ರತಿರೋಧ ತೋರಿದರೂ ಬಿಡದೆ ಬಟ್ಟೆ ಬಿಚ್ಚಿಸಿದ್ದಾರೆ.

ತಿರುವನಂತಪುರ(ಮೇ.09): ಕೇರಳದ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ  ಪರೀಕ್ಷೆಯಲ್ಲಿ ನಕಲಿ ಮಾಡುತ್ತಿದ್ದ ಆರೋಪಕ್ಕೆ ಬಟ್ಟೆ ಬಿಚ್ಚಿಸಿ ಅವಮಾನ ಮಾಡಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಪಾಲಕ್ಕಾಡ್ ಜಿಲ್ಲೆಯ ಲಯನ್ಸ್ ಶಾಲೆಯಲ್ಲಿ25 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಒಬ್ಬಳು ವಿದ್ಯಾರ್ಥಿನಿಯು  ಪರೀಕ್ಷೆಯಲ್ಲಿ ನಕಲಿ ಮಾಡುತ್ತಿರುವ ಬಗ್ಗೆ ಕೊಠಡಿಯ ಪರಿವೀಕ್ಷಕರು ಅನುಮಾನಗೊಂಡಿದ್ದಾರೆ. ಆಕೆಯನ್ನು ಪರೀಕ್ಷಿಸಿದ್ದಲ್ಲದೆ ಬ್ರಾ ಬಿಚ್ಚಿಸಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಆಕೆ ಪ್ರತಿರೋಧ ತೋರಿದರೂ ಬಿಡದೆ ಬಟ್ಟೆ ಬಿಚ್ಚಿಸಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರಕ್ಷಕರು ಲೈಂಗಿಕ ಕಿರುಕುಳದಡಿ ದೂರು ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿಯುತ್ತಿದೆ.

loader