Asianet Suvarna News Asianet Suvarna News

ಕೇರಳದಲ್ಲಿ ಜಲ ಪ್ರಳಯ : 12 ಜಿಲ್ಲೆಗಳಲ್ಲಿ ಹೈ ಅಲರ್ಟ್

ರಾಜ್ಯಕ್ಕೆ ರಾಜ್ಯವೇ ಮಳೆಯಲ್ಲಿ ತೇಲುತ್ತಿದ್ದು ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರ 12 ಜಿಲ್ಲೆಗಳಲ್ಲಿ ನಾಳೆಯವರೆಗೂ ಕಟ್ಟೆಚ್ಚರ ಘೋಷಿಸಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ.

Kerala floods Red alert in 12 of 14 Districts Kochi air port shut till Saturday
Author
Bengaluru, First Published Aug 15, 2018, 4:06 PM IST

ತಿರುವನಂತಪುರ[ಆ.15]:  ದೇವರ ನಾಡು ವರುಣನ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಶತಮಾನದಲ್ಲಿ ಹಿಂದೆಂದು ಕಂಡರಿಯದಂತ ಭಾರಿ ಮಳೆ ಕೇರಳದಲ್ಲಿ ಸುರಿಯುತ್ತಿದೆ. 

Kerala floods Red alert in 12 of 14 Districts Kochi air port shut till Saturday

ರಾಜ್ಯಕ್ಕೆ ರಾಜ್ಯವೇ ಮಳೆಯಲ್ಲಿ ತೇಲುತ್ತಿದ್ದು ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರ 12 ಜಿಲ್ಲೆಗಳಲ್ಲಿ ನಾಳೆಯವರೆಗೂ ಕಟ್ಟೆಚ್ಚರ ಘೋಷಿಸಿದೆ. ತಿರುವನಂತಪುರ, ಕೊಲ್ಲಂ, ಪಟನಂತಿಟ್ಟ, ಇಡುಕಿ, ಎರ್ನಾಕುಲಂ, ತ್ರಿಶೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ.

Kerala floods Red alert in 12 of 14 Districts Kochi air port shut till Saturday

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಗಿತ
ಮಳೆಯ ಕಾರಣದಿಂದ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಳೆದ 4 ದಿನಗಳಿಂದ ಸ್ಥಗಿತಗೊಳಿಸಲಾಗಿದೆ. ಅಪಾಯದ ಮಟ್ಟ ತಲುಪಿದ ಮುಲ್ಲಪೆರಿಯಾರ್ ಜಲಾಶಯದ ಗೇಟುಗಳನ್ನು ತೆರೆಯಲಾಗಿದೆ. ಜಲಾಶಯ ಸಮೀಪವಿರುವ 4 ಸಾವಿರ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

Kerala floods Red alert in 12 of 14 Districts Kochi air port shut till Saturday

ಇಡುಕ್ಕಿ ಜಲಾಶಯದ 5 ದ್ವಾರಗಳನ್ನು ಇಂದು ತೆರೆಯಲಾಗಿದ್ದು ಪ್ರತಿ ಸೆಕೆಂಡಿಗೆ 15 ಲಕ್ಷ ಲೀಟರ್ ನೀರು ಬಿಡುಗಡೆಯಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳ ಜಲಾಶಯಗಳು ತುಂಬಿದ್ದು ದ್ವಾರಗಳನ್ನು ತೆರೆದು ನೀರನ್ನು ಬಿಡುಗಡೆ ಮಾಡಲಾಗಿದೆ.

Kerala floods Red alert in 12 of 14 Districts Kochi air port shut till Saturday

44 ಕ್ಕೂ ಹೆಚ್ಚು ಮಂದಿ ಸಾವು
ರಾಜ್ಯದಾದ್ಯಂತ ಇಲ್ಲಿಯವರೆಗೂ ಒಟ್ಟು 44 ಮಂದಿ ಸಾವನಪ್ಪಿರುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.  ಮಳೆಯಿಂದಾಗಿ ಸಾವಿರಾರು ಕುಟುಂಬಗಳು ನೆಲೆ ಕಳೆದುಕೊಂಡಿದ್ದು ಆಯಾ ಜಿಲ್ಲೆಗಳಲ್ಲಿ ತಾತ್ಕಾಲಿಕ ಶಿಬಿರಗಳನ್ನು ಸ್ಥಾಪಿಸಲಾಗಿದೆ. ನಗರ, ಗ್ರಾಮೀಣ ಪ್ರದೇಶದ ಹಲವು ರಸ್ತೆಗಳು ಕೊಚ್ಚಿಹೋಗಿದ್ದು ಸಂಚಾರ ದಟ್ಟಣಿಯಿಂದಾಗಿ ಸಾವಿರಾರು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. 

Kerala floods Red alert in 12 of 14 Districts Kochi air port shut till Saturday

ಪ್ರಧಾನಿ ನರೇಂದ್ರ ಮೋದಿ ಇಂದಿನ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ದೇಶಾದ್ಯಂತ ಮಳೆಯಿಂದ ತೊಂದರೆಗೀಡಾಗಿರುವ ಪ್ರದೇಶಗಳನ್ನು ಪ್ರಸ್ತಾಪಿಸಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಕೇರಳದಲ್ಲಿ 1924 ರ ನಂತರ ಇಷ್ಟು ಭಾರಿ ಪ್ರಮಾಣದ ಮಳೆ ಬೀಳುತ್ತಿರುವುದು ಇದೇ ಮೊದಲಾಗಿದೆ.

ಕೇರಳ ಪ್ರವಾಹದಿಂದ ಸಮಸ್ತವನ್ನೂ ಕಳೆದುಕೊಂಡ ಸಂತ್ರಸ್ತರಿಗೆ ಏಷ್ಯಾನೆಟ್ ನ್ಯೂಸ್ ಚಾರಿಟೇಬಲ್ ಸಂಸ್ಥೆಯೊಂದನ್ನು ಆರಂಭಿಸಿದ್ದು,
ಜನರು ಉದಾರವಾಗಿ ದನ ಸಹಾಯ ಮಾಡಬಹುದು. ತಿರುವನಂತಪುರಮ್‌ನ ಕಾರ್ಪೋರೇಷನ್ ಬ್ಯಾಂಕ್‌ಗೆ ಹಣ ವರ್ಗಾವಣೆ
ಮಾಡಬಹುದಾಗಿದ್ದು, ಇಲ್ಲಿದೆ ಡೀಟೈಲ್ಸ್...

Asianet News Charitable Trust
 510331001274314
Corporation Bank Thiruvananthapuram Main Branch
IFSC  CORP0000070

Follow Us:
Download App:
  • android
  • ios