ಬೆಂಗಳೂರು(ಡಿ.19): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.


1. ಬೆಂಗಳೂರಿನಲ್ಲೂ 'ಪೌರತ್ವ'ದ ಕಿಚ್ಚು: ರಾಮಚಂದ್ರ ಗುಹಾ ಸೇರಿದಂತೆ ಹಲವರ ಬಂಧನ


ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಇದೀಗ ಇಡೀ ದೇಶ ಒಂದಾಗಿದೆ. ಆರಂಭದಲ್ಲಿ ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕೆ ಮಾತ್ರ ಸೀಮಿತವಾಗಿದ್ದ ಹೋರಾಟದ ಕಿಚ್ಚು ಪ್ರಸ್ತುತ ದಕ್ಷಿಣ ಭಾರತಕ್ಕೂ ವ್ಯಾಪಿಸಿದೆ. ಬೆಂಗಳೂರಿನ ಟೌನ್‌ಹಾಲ್‌, ಮೈಸೂರು ಬ್ಯಾಂಕ್‌ ಸರ್ಕಲ್‌ ಬಳಿ ನೂರಾರು ಜನ ಪ್ರಗತಿಪರ ಹೋರಾಟಗಾರರು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.  ಟೌನ್​ಹಾಲ್ ಬಳಿ ಪ್ರತಿಭಟಿಸುತ್ತಿದ್ದ ರಾಮಚಂದ್ರ ಗುಹಾ ಎಲ್ಲಾ ಪ್ರತಿಭಟನಾಕಾರರನ್ನು ಪೊಲೀಸರು ಸೆಕ್ಷನ್​ 144 ಜಾರಿಯಿರುವ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.

2. ಪ್ರತಿಭಟನಾ ಸ್ಥಳದಲ್ಲೇ ನಮಾಜ್, ಅಮಿತ್ ಶಾಗೆ ಖಡಕ್ ಎಚ್ಚರಿಕೆ ಕೊಟ್ಟ ಮಹಿಳೆ

ಪೌರತ್ವ ತಿದ್ದುಪಡಿ ಮಸೂದೆಗೆ ಇಡೀ ದೇಶಾದ್ಯಂತ ಒಂದಿಷ್ಟು ಸಂಘಟನೆಗಳು ವಿರೋಧ ಮಾಡಿಕೊಂಡು ಬಂದಿವೆ. ಬೆಂಗಳೂರಿನಲ್ಲಿ ನಿಷೇಧಾಜ್ಞೆ ಇದ್ದರೂ ಪುರಭವನದ ಬಳಿ ಪ್ರತಿಭಟನೆ ಜೋರಾಗಿತ್ತು. ಪ್ರತಿಭಟನಾಕಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

3. ಪಾಕಿಸ್ತಾನಿ ಹಿಂದೂ ಶರಣಾರ್ಥಿಗಳು: ಕಷ್ಟ ಹೇಳುವ ಸರಣಿ ಲೇಖನಗಳು!


ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಕಾಯ್ದೆ ಭಾರತದಲ್ಲಿ ಸಂಚಲನ ಮೂಡಿಸಿದೆ. ದಶಕಗಳಿಂದ ನಮ್ಮ ನೆರೆಯ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೆ ಗುರಿಯಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತ ನೆರಳಾಗುವ ಭರವಸೆ ನೀಡಿದೆ. ಪೌರತ್ವ ತಿದ್ದುಪಡಿ ಕುರಿತು ಭಾರತದಲ್ಲೇಕೆ ಚರ್ಚೆ ಶುರುವಾಗಿದೆ? ಕೆಲವರಿಗೇಕೆ ಭೀತಿ ಎದುರಾಗಿದೆ? ಅಷ್ಟಕ್ಕೂ ಪಾಕಿಸ್ತಾನ ಬಾಂಗ್ಲಾದೇಶ, ಅಫ್ಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾರೆಂದರೆ ಯಾರು? ಈ ರಾಷ್ಟ್ರಗಳಲ್ಲಿ ಅವರು ಅನುಭವಿಸುತ್ತಿರುವ ಸಂಕಷ್ಟ ಸಂಕಷ್ಟಗಳೇನು? ಈ ಎಲ್ಲವುಗಳ ಕುರಿತು ನಿಮ್ಮ ಸುವರ್ಣನ್ಯೂಸ್.ಕಾಂ ಸರಣಿ ಲೇಖನ ಪ್ರಕಟಿಸಲಿದೆ.

4.IPL Auction 2020 Live Updates: ಆಟಗಾರರ ಖರೀದಿಸಲು 8 ತಂಡಗಳಿಂದ ತೀವ್ರ ಪೈಪೋಟಿ!

5. ಹಿಂದೂ ಭಾವನೆಗಳಿಗೆ ಧಕ್ಕೆ : ಆಕ್ಷೇಪಾರ್ಹ ಸೀನ್‌ ಕಟ್ ಮಾಡಿದ ದಬಾಂಗ್-3 ತಂಡ


ಕಿಚ್ಚ ಸುದೀಪ್- ಸಲ್ಮಾನ್ ಖಾನ್ ಬಹುನಿರೀಕ್ಷಿತ 'ದಬಾಂಗ್-3' ಚಿತ್ರದ ಟೈಟಲ್ ಹಾಡಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಅಂಶಗಳಿವೆ ಎಂದು ಹಿಂದೂಪರ ಸಂಘಟನೆಗಳು ಆರೋಪ ಮಾಡಿದ್ದು ಚಿತ್ರತಂಡ ಅದಕ್ಕೆ ಕತ್ತರಿ ಪ್ರಯೋಗ ಮಾಡಿದೆ.

6. ಕುಂಕುಮವಿಡುವ ಬಿಂದುವಿನಲ್ಲಡಗಿದೆ ಆರೋಗ್ಯದ ಗುಟ್ಟು!


ಭಾರತೀಯ ಸಂಪ್ರದಾಯದಲ್ಲಿ ಕುಂಕುಮಕ್ಕೆ ವಿಶೇಷವಾದ ಸ್ಥಾನಮಾನವಿದೆ. ಹಣೆಯ ಮೇಲೊಂದು ಬಿಂದಿಯಿಟ್ಟರೇನೆ ಹೆಣ್ಣಿನ ಮುಖದ ಮೇಕಪ್ನ ಮೆರುಗು ಹೆಚ್ಚುವುದು. ಆದರೆ, ಕುಂಕುಮ ಬರೀ ಅಂದ ಹೆಚ್ಚಿಸುವ ಪ್ರಸಾದನವಷ್ಟೇ ಅಲ್ಲ, ಅದರ ಬಳಕೆ ಹಿಂದೆ ಆರೋಗ್ಯದ   ಗುಟ್ಟು ಅಡಗಿದೆ. ಕುಂಕುಮವನ್ನು ಹಣೆಯ ಮಧ್ಯಭಾಗದಲ್ಲಿಡುತ್ತೇವೆ. ಈ ಭಾಗದಲ್ಲಿ ಚಕ್ರ ಬಿಂದುವಿದ್ದು, ಅದನ್ನು ಒತ್ತಿ ಹಿಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಬಹುದು.


7. ಫ್ಯಾಷನ್‌ ಟ್ರೆಂಡಿಂಗ್‌ನಲ್ಲಿ ಸಿಲಿಕಾನ್ ಸಿಟಿ ಮುಂದು; ಇನ್ನಷ್ಟು ಹೆಚ್ಚಾಗಲಿದೆ ಆನ್‌ಲೈನ್‌ ಶಾಪಿಂಗ್


ಸಿಲಿಕಾನ್ ಸಿಟಿ ಐಟಿ, ಬಿಟಿ ಸಿಟಿಯ ಜೊತೆಗೆ ಫ್ಯಾಷನ್ ಟ್ರೆಂಡ್ ಸಿಟಿಯೂ ಹೌದು. ದಿನಕ್ಕೊಂದು ಹೊಸ ಹೊಸ ರೀತಿಯ ಟ್ರೆಂಡ್, ಹೊಸ ಹೊಸ ಫ್ಯಾಷನ್ ಬರುತ್ತಲೇ ಇರುತ್ತದೆ. ಫ್ಯಾಷನ್ ಪ್ರಿಯರಿಗೆ ಹೇಳಿ ಮಾಡಿಸಿದ ನಗರವಿದು. ಫ್ಯಾಷನ್ ಲೋಕದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಅಭಿವೃದ್ಧಿ ಬಗ್ಗೆ ಚರ್ಚಿಸುವಂತಹ 'ಇಂಡಿಯಾ ಫ್ಯಾಷನ್ ಫೋರಮ್ 2019' ಡಿಸಂಬರ್ 18, 19 ರಂದು ನಡೆದಿದೆ.

8. IPL ಹರಾಜು: ದಾಖಲೆ ಮೊತ್ತಕ್ಕೆ ಸೇಲಾದ ವೇಗಿ ಪ್ಯಾಟ್ ಕಮಿನ್ಸ್

ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ದಾಖಲೆ ಬರೆದಿದ್ದಾರೆ. ಕಮಿನ್ಸ್ ಬರೋಬ್ಬರಿ 15.50 ಕೋಟಿ ರೂಪಾಯಿಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಖರೀದಿಸಿತು. ಇದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಒಟ್ಟು ಐಪಿಎಲ್ ಹರಾಜಿನಲ್ಲಿ 2ನೇ ಗರಿಷ್ಠ ಮೊತ್ತ ಅನ್ನೋ ದಾಖಲೆ ಬರೆದಿದೆ.

9. ಅಷ್ಟಕ್ಕೂ ಹಿಂದೂ ಶರಣಾರ್ಥಿಗಳಿಗೆ ಎಲ್ಲಿ ಜಾಗ ಕೊಡ್ತಿರಿ?: ಉದ್ಧವ್!


ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ,  ದೇಶದಲ್ಲಿ ವಿದೇಶಿ ಹಿಂದೂ ಅಕ್ರಮ ವಲಸಿಗರಿಗೆ ನೀವು ಎಲ್ಲಿ ಮತ್ತು ಹೇಗೆ ನೆಲೆ ಕಲ್ಪಿಸುತ್ತೀರಿ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
 

10. ಮಂಗಳೂರು: ಪೌರತ್ವ ಕಿಚ್ಚು ನಂದಿಸಲು ಗಾಳಿಯಲ್ಲಿ ಗುಂಡು

ಪೌರತ್ವ ಮಸೂದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಮಂಗಳೂರಿನಲ್ಲಿ ವಿಕೋಪಕ್ಕೆ ತಿರುಗಿದೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದಕ್ಕೂ ಬಗ್ಗದಿದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದು ಸದ್ಯ ಮಂಗಳೂರಿನಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.