ಬೆಂಗಳೂರು[ಜ.25]  ‘ಸೂಪರ್ ಸಿಎಂ‘ ಎಚ್‌ಡಿ ರೇವಣ್ಣ ಆಸ್ಟ್ರೇಲಿಯಾದಲ್ಲಿ ಇದ್ದುಕೊಂಡೆ ವರ್ಗಾವಣೆ ಮಾಡಿದ್ರಾ? ಎನ್ನುವ ಪ್ರಶ್ನೆ ಸಹ ಮೂಡಿದೆ.

ಮುಖ್ಯ ಇಂಜಿನಿಯರ್, ವ್ಯವಸ್ಥಾಪಕ ನಿರ್ದೇಶಕ ದರ್ಜೆಯ ಹುದ್ದೆಗಳಲ್ಲಿ ಇರುವ ಒಟ್ಟು 9 ಜನರ ವರ್ಗಾವಣೆ ಮಾಡಲಾಗಿದೆ.  ಜನವರಿ 21 ನೇ ತಾರೀಕು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಆದರೆ 19 ನೇ ತಾರೀಕಿನಂದೇ ಆಸ್ಟ್ರೇಲಿಯಾ ಪ್ರವಾಸಕ್ಕೆ ರೇವಣ್ಣ ತೆರಳಿದ್ದಾರೆ!

ಡಿಸಿ ರೋಹಿಣಿ ಕೊಟ್ಟ ಏಟಿಗೆ ರೇವಣ್ಣ ಬೆಂಬಲಿಗರು ಚೆಲ್ಲಾಪಿಲ್ಲಿ

ಹೀಗಿದ್ದರೂ  9 ಅಧಿಕಾರಿಗಳ ವರ್ಗಾವಣೆಯಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ರೇವಣ್ಣ ಗಮನಕ್ಕೆ ಬಾರದೇ ಒಂದೇ ಒಂದೂ ವರ್ಗಾವಣೆ ನಡೆಯಲ್ಲ ಎಂಬ ಮಾತಿದೆ. ರೇವಣ್ಣ ಅನುಪಸ್ಥಿತಿಯಲ್ಲೂ ವರ್ಗಾವಣೆ ಹೇಗೆ ನಡೆಯಿತು ಎಂಬ ಪ್ರಶ್ನೆ ಸಹ ಇನ್ನೊಂದದು ಕಡೆ ಮೂಡಿದೆ.  ರೇವಣ್ಣ ಲೋಕೋಪಯೋಗಿ ಸಚಿವರಾಗ ಮೇಲೆ ಒಂದು ಸಾವಿರಕ್ಕೂ ಹೆಚ್ಚು ವರ್ಗಾವಣೆ ನಡೆದಿರುವುದು ನಮ್ಮ ಮುಂದಿರುವ ಸತ್ಯ.