ಬೆಂಗಳೂರು[ಅ.12] ಈಗಾಗಲೇ ಲಭ್ಯವಿರುವ ಪ್ರಿಯಂ ಬಸ್ ಗಳ ಜತೆ 2,500 ಹೆಚ್ಚುವರಿ ಬಸ್  ಸಂಚಾರ ಮಾಡಿಸಲು ತೀರ್ಮಾನ ಮಾಡಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಹೆಚ್ಚುವರಿಯಾಗಿ 300 ಬಸ್ ಬಿಡಲಾಗುತ್ತಿದೆ.  ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಮೈಸೂರು ರಸ್ತೆಯ ಸೆಟಲೈಟ್ ನಿಲ್ದಾಣ ಹಾಗೂ ಬಸವೇಶ್ವರ ನಿಲ್ದಾಣದಿಂದ ಬಸ್ ವ್ಯವಸ್ಥೆ ಮಾಡಲಾಗಿದ್ದು ಆನ್ ಲೈನ್ ನಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ.

ಒಂದೇ ಸಲ ನಾಲ್ಕುಕ್ಕೂ ಹೆಚ್ಚು ಟಿಕೆಟ್ ಬುಕ್ ಮಾಡಿದ್ರೆ ಶೇ. 5 ರಷ್ಟು ರಿಯಾಯಿತಿ ಹೋಗುವ ಮತ್ತು ಬರುವ ಟಿಕೆಟ್ ಒಮ್ಮೆಲೇ ಬುಕ್ ಮಾಡುದ್ರೆ ಶೇ. 10 ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಶೇಷ ದರ್ಶಿನಿ ಕೊಡುಗೆ: ಬೆಳಗ್ಗೆ ಮೈಸೂರಿನಿಂದ ಹೊರಡುವ ಬಸ್ ಗಳು ಸಾಂಯಕಾಲ ವಾಪಸಾಗಲಿವೆ. ರಸ್ತೆ ಸಾರಿಗೆ ಸಂಸ್ಥೆ 3 ಪ್ರಕಾರದ ವ್ಯವಸ್ಥೆ ಮಾಡಿದೆ.

1. ಮೈಸೂರುಗೆ ಆಗಮಿಸುವ ಪ್ರವಾಸಿಗರಿಗೆ ವಿಶೇಷ ಕೊಡುಗೆ ನೀಡಲಗಿದ್ದು ಗಿರಿದರ್ಶಿನಿ ಅಂದರೆ ಬಂಡೀಪುರ, ಗೋಪಾಲಸ್ವಾಮಿ ಬೆಟ್, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಮತ್ತು ಚಾಮುಂಡಿ ಬೆಟ್ಟಕ್ಕೆ ಸಂಚಾರ ಮಾಡಲಾಗುತ್ತದೆ.[350 ರೂ. ಮಕ್ಕಳಿಗೆ 175 ರೂ.]

2. ಜಲದರ್ಶಿನಿ ಮೂಲಕ ಬೈಲಕುಪ್ಪೆ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ ನಿಸರ್ಗಧಾಮ, ರಾಜಸೀಟ್, ಹಾರಂಗಿ ಜಲಾಶಯ, ಮತ್ತು ಕೆಆರ್ ಎಸ್ ಗೆ ಈ ಬಸ್ ಸಂಚಾರ ಮಾಡಲಿದೆ.[375 ರೂ. ಮಕ್ಕಳಿಗೆ 190 ರೂ.]

3.ದೇವದಶಿರ್ಶಿನಿ ಎಂಬ ಮೂರನೇ ಪ್ರಕಾರದ ಬಸ್ ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಶ್ರೀರಂಗಪಟ್ಟಣ[275 ರೂ. ಮಕ್ಕಳಿಗೆ 140 ರೂ.] ಟಿಕೆಟ್ ಗಳನ್ನು http://www.ksrtc.in ನಲ್ಲಿ ಕಾಯ್ದಿರಿಸಬಹುದು.